ವೀರಾಜಪೇಟೆ, ಜೂ. 10: ಕಳೆದ 10 ತಿಂಗಳ ಹಿಂದೆ ವೀರಾಜಪೇಟೆ ವಿಭಾಗಕ್ಕೆ ಬಿದ್ದ ಭಾರೀ ಮಳೆಗೆ ಇಲ್ಲಿನ ಸಿದ್ದಾಪುರ ರಸ್ತೆಯಲ್ಲಿರುವ ಮಲೆತಿರಿಕೆ ಬೆಟ್ಟದ ಮಧ್ಯ ಭಾಗದಲ್ಲಿ ಬಿರುಕು ಕಂಡಿದ್ದ ಸ್ಥಳಕ್ಕೆ ಎನ್.ಡಿ.ಆರ್.ಎಫ್ ತಂಡ ಭೇಟಿ ನೀಡಿ ಪರಿಶೀಲಿಸಿತು.

ಇದೇ ಸಂದರ್ಭ ಬೆಟ್ಟದಲ್ಲಿ ಬಿರುಕು ಪರಿಶೀಲನೆಯ ನಂತರ ಮಾತನಾಡಿದ ಕೊಡಗು ವಿಪತ್ತು ನಿರ್ವಹಣಾ ತಂಡದ ಮುಖ್ಯಸ್ಥ ಅಮೂಲ್ಯ ವಾಸುದೇವ್ ಬೆಟ್ಟದಲ್ಲಿ ನೆಲ ಮಟ್ಟದ ಮೇಲ್ಭಾಗದ ಬಿರುಕು ಸುಮಾರು 60 ಅಡಿ ಆಳದವರೆಗೂ ಇರುತ್ತದೆ. ಈ ಬಿರುಕು ಅಪಾಯ, ಸುರಕ್ಷತೆಯ ಹಿತ ದೃಷ್ಟಿಯಿಂದ ಇದರ ವೀರಾಜಪೇಟೆ, ಜೂ. 10: ಕಳೆದ 10 ತಿಂಗಳ ಹಿಂದೆ ವೀರಾಜಪೇಟೆ ವಿಭಾಗಕ್ಕೆ ಬಿದ್ದ ಭಾರೀ ಮಳೆಗೆ ಇಲ್ಲಿನ ಸಿದ್ದಾಪುರ ರಸ್ತೆಯಲ್ಲಿರುವ ಮಲೆತಿರಿಕೆ ಬೆಟ್ಟದ ಮಧ್ಯ ಭಾಗದಲ್ಲಿ ಬಿರುಕು ಕಂಡಿದ್ದ ಸ್ಥಳಕ್ಕೆ ಎನ್.ಡಿ.ಆರ್.ಎಫ್ ತಂಡ ಭೇಟಿ ನೀಡಿ ಪರಿಶೀಲಿಸಿತು.

ಇದೇ ಸಂದರ್ಭ ಬೆಟ್ಟದಲ್ಲಿ ಬಿರುಕು ಪರಿಶೀಲನೆಯ ನಂತರ ಮಾತನಾಡಿದ ಕೊಡಗು ವಿಪತ್ತು ನಿರ್ವಹಣಾ ತಂಡದ ಮುಖ್ಯಸ್ಥ ಅಮೂಲ್ಯ ವಾಸುದೇವ್ ಬೆಟ್ಟದಲ್ಲಿ ನೆಲ ಮಟ್ಟದ ಮೇಲ್ಭಾಗದ ಬಿರುಕು ಸುಮಾರು 60 ಅಡಿ ಆಳದವರೆಗೂ ಇರುತ್ತದೆ. ಈ ಬಿರುಕು ಅಪಾಯ, ಸುರಕ್ಷತೆಯ ಹಿತ ದೃಷ್ಟಿಯಿಂದ ಇದರ ಸ್ಥಳಾಂತರಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಭೇಟಿಯ ಸಂದರ್ಭ ಎನ್.ಡಿ. ಆರ್.ಎಫ್.ನ ತಂಡದ ಕಮಾಡೆಂಟ್ ಆರ್.ಕೆ. ಉಪಾಧ್ಯಾಯ, ವೀರಾಜಪೇಟೆ ಪ.ಪಂ. ಅಭಿಯಂತರ ಎಂ.ಪಿ. ಹೇಮ್‍ಕುಮಾರ್, ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ, ಪ.ಪಂ. ಸದಸ್ಯ ಡಿ.ಪಿ. ರಾಜೇಶ್ ಮತ್ತಿತರರು ಹಾಜರಿದ್ದರು.