ಚೆಟ್ಟಳ್ಳಿ, ಜೂ. 10: ಕೊಡಗು ಜಿಲ್ಲೆಯ ನಿವಾಸಿಯಾದಂತಹ ವಿಂದ್ಯಾ ಪೂಣಚ್ಚ ಎಂಬ ಮಹಿಳೆ ಮೊಹಮ್ಮದ್ ಪೈಗಂಬರ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿ, ಮುಸ್ಲಿಂ ಸಮುದಾಯಕ್ಕೆ ಬಹಳ ಘಾಸಿಯುನ್ನುಂಟು ಮಾಡಿದ್ದು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್.ಕೆ.ಎಸ್.ಎಸ್.ಎಫ್. ಜಿಸಿಸಿ ಘಟಕ ಒತ್ತಾಯ ಮಾಡಿದೆ. ಈ ಘಟನೆ ಬಗ್ಗೆ ಪೆÇಲೀಸರಿಗೆ ಹಲವು ಸಂಘ-ಸಂಸ್ಥೆಗಳು ಪ್ರಕರಣವನ್ನು ದಾಖಲಿಸಿದ್ದರೂ ಕೂಡಾ ಇದುವರೆಗೂ ಬಂಧಿಸಿಲ್ಲ.
ಪ್ರವಾದಿ ಮಹಮ್ಮದ್ ಮೊಹಮ್ಮದ್ ಪೈಗಂಬರ್ ಅವರನ್ನು ನಿಂದಿಸಿರುವುದು ಇಡೀ ಮನುಕುಲವನ್ನು ನಿಂದಿಸಿದಕ್ಕೆ ಸಮಾನವಾಗಿದೆ ಎಂದು ಎಸ್.ಕೆ.ಎಸ್.ಎಸ್.ಎಫ್. ಜಿಸಿಸಿ ಕೊಡಗು ಘಟಕ ಆರೋಪಿಸಿದೆ.
ಘಟನೆಯನ್ನು ತೀವ್ರವಾಗಿ ಖಂಡಿಸುತ್ತಾ, ಕಿಡಿಗೇಡಿ ವಿಂದ್ಯಾ ಪೂಣಚ್ಚಳನ್ನು ಆದಷ್ಟು ಬೇಗನೆ ಬಂಧಿಸಬೇಕೆಂದು ಎಸ್.ಕೆ.ಎಸ್.ಎಸ್.ಎಫ್. ಜಿಸಿಸಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹುಸೈನ್ ಫೈಝಿ, ಬಜೆಗುಂಡಿ ಹಾಗೂ ಪ್ರಧಾನ ಕಾರ್ಯದರ್ಶಿ ಶಿಹಾಬ್ ನೆಲ್ಲಿಹುದಿಕೇರಿ ಒತ್ತಾಯ ಮಾಡಿದ್ದಾರೆ.