*ಗೋಣಿಕೊಪ್ಪಲು, ಜೂ. 10: ಹಿಂದೂ ರುದ್ರಭೂಮಿಯ ತಡೆಗೋಡೆಯ ಮುಂಭಾಗದಲ್ಲಿ ಎಸ್.ಕೆ.ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿಗಳು ಕಸ ಸುರಿದು ವಾತಾವರಣ ಕಲುಷಿತಗೊಳಿಸಿದ ಕಾರಣ ಗೋಣಿಕೊಪ್ಪಲು ಪಂಚಾಯಿತಿಯು ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿಗಳಿಂದಲೇ ಹಾಕಿದ ಕಸವನ್ನು ತೆಗೆಸಿ 5000 ರೂಪಾಯಿ ದಂಡ ವಿಧಿಸಿ ಶಿಸ್ತಿನ ಕ್ರಮ ಕೈಗೊಂಡಿದೆ.

ಗೋಣಿಕೊಪ್ಪಲು, ಪೆÇನ್ನಂಪೇಟೆ ರಸ್ತೆಯಲ್ಲಿ ಹಾದುಹೋಗುವ ಮಾರ್ಗ ದಲ್ಲಿರುವ ಹಿಂದೂ ರುದ್ರಭೂಮಿಯ ತಡೆಗೋಡೆಯ ಸಮೀಪ ಪರ ಊರಿನಿಂದ ಬರುವವರು ಕಸ ಸುರಿಯುತ್ತಿದ್ದರು. ಹೀಗಾಗಿ ಈ ಸ್ಥಳ ಕಸ ತ್ಯಾಜ್ಯಗಳಿಂದ ಕಲುಷಿತ ಗೊಂಡಿತ್ತು. ಇದನ್ನು ಮನಗಂಡು ಪಂಚಾಯಿತಿ ಇಲ್ಲಿದ್ದ ಕಸವನ್ನು ತೆರವುಗೊಳಿಸಿ ಶುಚಿತ್ವವನ್ನು ಕಾಪಾಡಿಕೊಳ್ಳಲು ಕ್ರಮ ಕೈಗೊಂಡಿತ್ತು. ಆದರೆ ಬುಧವಾರ ದಿನ ಬೆಳಿಗ್ಗೆ ಗೋಣಿಕೊಪ್ಪಲುವಿನ ಕಾವೇರಿ ಹಿಲ್ಸ್ ಬಡಾವಣೆಯ ಮೈಕ್ರೋ ಫೈನಾನ್ಸ್ ಕಂಪೆನಿಯ ಸಿಬ್ಬಂದಿಗಳು ಕಸ ಸುರಿದು ಹೋಗಿದ್ದರು. ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ತಕ್ಷಣ ಕಸದಲ್ಲಿರುವ ವಿಳಾಸವನ್ನು ಪತ್ತೆ ಹಚ್ಚಿ ಅಂಚೆ ವಿಳಾಸದಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಕಸ ಸುರಿದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ನಂತರ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮತ್ತು ಸದಸ್ಯ ಮಂಜು ರೈ ಅವರಿಗೆ ದೂರವಾಣಿ ಕರೆ ಮಾಡಿದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ತಕ್ಷಣ ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿ ಶ್ರೀನಿವಾಸ್ ಮತ್ತು ಗ್ರಾ.ಪಂ. ಸದಸ್ಯ ಮಂಜು ರೈ ಅವರು ಕಂಪೆನಿಯ ಕಚೇರಿಗೆ ದೂರವಾಣಿ ಕರೆ ಮಾಡಿ ತಕ್ಷಣ ಕಸ ಸುರಿದಿರುವ ಸ್ಥಳಕ್ಕೆ ಬಂದು ಕಸವನ್ನು ಕೊಂಡ್ಯೊಯುವಂತೆ ತಿಳಿಸಿದರು. ಸ್ಥಳಕ್ಕೆ ಬಂದ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಂದಲೇ ಕಸವನ್ನು ತೆಗೆಸಿದ್ದಲ್ಲದೇ ಮುಂದಿನ ದಿನಗಳಲ್ಲಿ ಮತ್ತೆ ಈ ರೀತಿ ಮುಂದುವರೆದರೆ ಕಂಪೆನಿಯು ಕಾರ್ಯನಿರ್ವಹಿಸಲು ಹೊಂದಿರುವ ಸ್ಥಳೀಯ ಪರವಾನಗಿ ಯನ್ನು ರದ್ದುಗೊಳಿಸುವುದಾಗಿ ಪಿಡಿಓ ಶ್ರೀನಿವಾಸ್ ಎಚ್ಚರಿಕೆ ನೀಡಿದರು. ಈ ಸಂದರ್ಭ ಹಿಂದೂ ಪರ ಸಂಘಟ ನೆಯ ಮಂಜು ಮಾಯಮುಡಿ, ಶಶಿ, ಮಹೇಶ, ಸುರೇಶ ಸೇರಿದಂತೆ ಹಲವರು ಹಾಜರಿದ್ದರು.

- ದಿನೇಶ್ ಎನ್.ಎನ್.