ಸಿದ್ದಾಪುರ, ಜೂ. 9: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಕೋವಿ ಕಳ್ಳತನ ಮಾಡಿರುವ ಘಟನೆ ಚೆನ್ನಯ್ಯನ ಕೋಟೆ ಗ್ರಾಮದಲ್ಲಿ ನಡೆದಿದೆ. ಚೆನ್ನಯ್ಯನ ಕೋಟೆ ಗ್ರಾಮದ ನಿವಾಸಿ, ಮೈಸೂರಿನಲ್ಲಿ ವಾಸ ಮಾಡಿಕೊಂಡಿರುವ ಕೆ.ಎಂ. ಮುತ್ತಣ್ಣ ಎಂಬವರು ಕಳೆದ ಮೂರು ತಿಂಗಳಿನಿಂದ ಚೆನ್ನಯ್ಯನ ಕೋಟೆ ಮನೆಗೆ ಬಂದಿರಲಿಲ್ಲ. ಮಂಗಳವಾರದಂದು ಮೈಸೂರಿನಿಂದ ಚೆನ್ನಯ್ಯನ ಕೋಟೆ ತಮ್ಮ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.ಮುತ್ತಣ್ಣ ಹಾಗೂ ಸಹೋದರರು ವಾಸವಿರುವ ಮನೆಯಿಂದ ಕೋವಿಯನ್ನು ಕಳ್ಳತನ ಮಾಡಲಾಗಿದೆ. ಮನೆಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಎಸ್‍ಬಿಬಿಎಲ್ ಕೋವಿಯನ್ನು ಕಳ್ಳತನ ಮಾಡಿದ್ದಾರೆ. ಅಲ್ಲದೆ ಮುತ್ತಣ್ಣನವರ ಸಹೋದರರ ಕೊಠಡಿಗೂ ಕೂಡ ನುಗ್ಗಿದ್ದಾರೆ. ಕಳ್ಳರು ಕೋವಿಯೊಂದಿಗೆ ಕಾಡ ತÀೂಸುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಮುತ್ತಣ್ಣನವರು ಸಿದ್ದಾಪುರ ಪೆÇಲೀಸ್ ಠಾಣೆಗೆ ಪುಕಾರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಆದರೆ ಕಳ್ಳತನ ಯಾವ ದಿನ ನಡೆದಿರುತ್ತದೆ ಎಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.