ನಾಪೆÇೀಕ್ಲು, ಜೂ. 9: ಕೊರೊನಾ ವೈರಸ್ ಭೀತಿಯಿಂದ ಮುಚ್ಚಲ್ಪಟ್ಟಿದ್ದ ಮಸೀದಿ, ಮಂದಿರ, ಚರ್ಚುಗಳನ್ನು ತೆರೆಯಲು ಸರಕಾರ ಅನುಮತಿ ನೀಡಿದೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿಯ ಹಿನ್ನೆಲೆಯಲ್ಲಿ ನಾಪೆÇೀಕ್ಲು ಮೊಹಿದ್ದೀನ್ ಸುನ್ನಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ಮುಂದಿನ ಒಂದು ತಿಂಗಳವರೆಗೆ ಮಸೀದಿಯನ್ನು ಸಾಮೂಹಿಕ ಪ್ರಾರ್ಥನೆಗೆ ತೆರೆಯದಿರಲು ತೀರ್ಮಾನಿಸಿದೆ ಎಂದು ಜಮಾಅತ್ ಅಧ್ಯಕ್ಷ ಪಿ.ಎಂ. ಸಲೀಂ ಹ್ಯಾರೀಸ್ ತಿಳಿಸಿದ್ದಾರೆ.