ಗೋಣಿಕೊಪ್ಪ, ಜೂ. 9: ಮೋದಿ ಸರ್ಕಾರದ ಆಡಳಿತದ ಒಂದು ವರ್ಷದ ಪೂರೈಕೆಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಸಾಧನೆಯ ಬಗ್ಗೆ ಮನೆಮನೆಗಳಿಗೆ ಕರಪತ್ರ ಹಂಚುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಶಾಸಕ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7ನೇ ವಿಭಾಗದ ವೆಂಕಟಪ್ಪ ಬಡಾವಣೆಯ ಮನೆಗಳಲ್ಲಿ ಕರಪತ್ರವನ್ನು ವಿತರಿಸಿ ಮೋದಿ ಸರ್ಕಾರದ ಸಾಧನೆಯ ಬಗ್ಗೆ ತಿಳಿಸಿದರು. ಐತಿಹಾಸಿಕ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಪ್ರಪಂಚದಲ್ಲಿ ಭಾರತದ ಹೆಸರನ್ನು ಎತ್ತಿಹಿಡಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.

ಕರಪತ್ರ ಹಂಚಿಕೆ ಜಾಗೃತಿ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ, ಜಾಗೃತಿ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಗುಮ್ಮಟಿರ ಕಿಲನ್ ಗಣಪತಿ, ಜಿಲ್ಲಾ ಬಿಜೆಪಿ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಬಿಜೆಪಿ ಅಧ್ಯಕ್ಷ ನೆಲ್ಲಿರ ಚಲನ್, ಜಾಗೃತಿ ಕಾರ್ಯಕ್ರಮದ ಗೋಣಿಕೊಪ್ಪಲು ಮಂಡಲ ಸಂಯೋಜಕ ವಾಟೇರಿರ ಬೋಪ್ಪಣ್ಣ, ಅಜ್ಜಿಕುಟ್ಟಿರ ಪ್ರವೀಣ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ನೂರೇರ ರತಿ ಅಚ್ಚಪ್ಪ, ರಾಮಕೃಷ್ಣ, ತಾಲೂಕು ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಅರುಣ್ ಭೀಮಯ್ಯ ಹಾಗೂ ಕಾರ್ಯಕರ್ತರು ಹಾಜರಿದ್ದರು.ಟಿ. ಶೆಟ್ಟಿಗೇರಿ: ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಯೋಜನೆ ಕುರಿತಂತೆ ಮನೆ ಮನೆ ಭೇಟಿ ಕಾರ್ಯಕ್ರಮ ಟಿ. ಶೆಟ್ಟಿಗೇರಿಯಲ್ಲಿ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಞ್ಞಂಗಡ ಅರುಣ್ ಭೀಮಯ್ಯ ಹಾಗೂ ಟಿ. ಶೆಟ್ಟಿಗೇರಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ನಂತರ ಮೋದಿ ಸರ್ಕಾರ ಮಾಡಿದ ಸಾಧನೆಯ ಬಗ್ಗೆ ವಿಶ್ಲೇಷಣೆ ಮಾಡಿ ಮನೆ, ಅಂಗಡಿ ಮುಂಗಟ್ಟುಗಳಿಗೆ ಕರಪತ್ರ ಹಂಚಲಾಯಿತು. ಈ ಸಂದರ್ಭ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಸದಸ್ಯ ಚೆಟ್ಟಂಗಡ ರಂಜು ಕರುಂಬಯ್ಯ, ಪ್ರಾ.ಕೃ.ಪ.ಸ.ಸಂ. ಮಾಜಿ ಅಧ್ಯಕ್ಷ ಕುಞ್ಞಂಗಡ ಕೃಷ್ಣ, ಪಂಚಾಯಿತಿ ಸಮಿತಿ ಪ್ರಧಾನ ಕಾರ್ಯದರ್ಶಿ ಮಾಣೀರ ಉಮೇಶ್, ಕಾರ್ಯದರ್ಶಿ ಬಾಚೀರ ಬೋಪಣ್ಣ, ವೀರಾಜಪೇಟೆ ಮಂಡಲ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಚೆಟ್ಟಂಗಡ ಮಹೇಶ್ ಮಂದಣ್ಣ, ಬೂತ್ ಅಧ್ಯಕ್ಷರುಗಳಾದ ಚೆಟ್ಟಂಗಡ ಡಾಲಿ ರಾಜ, ಕಾಳಿಮಾಡ ಸೂರಜ್, ತಡಿಯಂಗಡ ಶಮ್ಮಿ, ಕಾರ್ಯಕರ್ತರಾದ ಸವೀನ್, ಚೆಟ್ಟಂಗಡ ಸತ್ಯ, ಚೆಟ್ಚಂಡ್ರ ಕಿರಣ್ ಕಾಲಪ್ಪ, ಚೆಟ್ಟಂಡ್ರ ನಾಣಿ, ಚೆಟ್ಟಂಗಡ ಕವನ್, ಚೊಟ್ಟೇಯಂಡಮಾಡ ಗಣೇಶ್, ಚೊಟ್ಟೆಯಂಡಮಾಡ ಧನು ಚೆಟ್ಟಂಡ್ರ ಗಿಳಿ ಹಾಗೂ ಇನ್ನೂ ಹಲವಾರು ಕಾರ್ಯಕರ್ತರು ಭಾಗಿಯಾಗಿದ್ದರು.