ಪೆÇನ್ನಂಪೇಟೆ, ಜೂ. 8: ಇಲ್ಲಿಗೆ ಸಮೀಪದ ಮುಗುಟಗೇರಿ ಗ್ರಾಮದ ಕಾಫಿ ತೋಟಗಳಿಗೆ ಕಾಡಾನೆಗಳು ನುಗ್ಗಿ ದಾಂದಲೆ ನಡೆಸಿದ್ದು ಕಾಫಿ ಗಿಡ ಹಾಗೂ ಬಾಳೆ ಗಿಡಗಳನ್ನು ತುಳಿದು ನಾಶಗೊಳಿಸಿವೆ. ಗ್ರಾಮದ ಚೀರಂಡ ಚಂಗಪ್ಪ ಎಂಬುವವರ ತೋಟಕ್ಕೆ ನುಗ್ಗಿ ಕಾಫಿ ಗಿಡ ಹಾಗೂ ಬಾಳೆ ಗಿಡಗಳನ್ನು ಮುರಿದು ಹಾಕಿರುವ ಆನೆಗಳು ಸಾಕಷ್ಟು ನಷ್ಟ ಉಂಟು ಮಾಡಿವೆ.

ಚೀರಂಡ ಕಂದ ಸುಬ್ಬಯ್ಯ, ಕೋಟೆರ ಸುದೀಪ, ಚೀರಂಡ ಗಣಪತಿ, ಚೀರಂಡ ಪೂವಯ್ಯ, ಕಳ್ಳಿಚಂಡ ಸಾಬು ಹಾಗೂ ಇನ್ನಿತರರ ತೋಟಗಳಿಗೂ ಹಾನಿ ಮಾಡಿವೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಶನಿವಾರ ಆನೆಗಳನ್ನು ತೋಟಗಳಿಂದ ಕಾಡಿಗಟ್ಟುವ ಪ್ರಯತ್ನಮಾಡಿದ್ದರು. ಆದರೆ ಮತ್ತೆ ಭಾನುವಾರ ಪೆÇನ್ನಂಪೇಟೆಯ ಭಗವತಿ ನಗರ ಸಮೀಪ ಕಾಣಿಸಿಕೊಂಡಿದ್ದ ಪುಂಡಾನೆಗಳು ಮುಗುಟಗೇರಿ ತೊಣಕೇರಿ ಭಗವತಿ ದೇವರ ಕಾಡಿನ ಸಮೀಪ ಇರುವ ಕಳ್ಳಿಚಂಡ ಕಟ್ಟಿ ಪೂಣಚ್ಚ ಅವರ ತೋಟದಲ್ಲಿ ಬೀಡು ಬಿಟ್ಟಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಕಳೆದ ಎರಡು ಮೂರು ದಿನದಿಂದ ಮುಗುಟಗೇರಿಯ ತೋಟಗಳಲ್ಲಿ ಆನೆಗಳು ಸಂಚರಿಸುತ್ತಿರುವುದರಿಂದ ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗಳಿಂದ ನಷ್ಟ ಅನುಭವಿಸಿರುವ ಬೆಳೆಗಾರರಿಗೆ ಪರಿಹಾರ ನೀಡಬೇಕು. ಹಾಗೂ ಕೊಡಲೇ ಆನೆಗಳನ್ನು ಕಾಡಿಗಟ್ಟುವ ಕೆಲಸ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.

-ಚನ್ನನಾಯಕ