*ಗೋಣಿಕೊಪ್ಪಲು, ಜೂ. 8: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ ಅವರು 70 ದಿನಗಳ ಬಳಿಕ ಲಾಕ್‍ಡೌನ್ ಸಡಿಲಗೊಂಡ ಹಿನ್ನೆಲೆ ತಮ್ಮ ಕ್ಷೇತ್ರದ ಬಾಳೆಲೆ ಮತ್ತು ನಿಟ್ಟೂರು ಗ್ರಾ.ಪಂ ವ್ಯಾಪ್ತಿಯಲ್ಲಿ 27 ಕೋಟಿ 53 ಲಕ್ಷ ಅನುದಾನದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.

8 ಕೋಟಿ 50 ಲಕ್ಷ ಅನುದಾನದಲ್ಲಿ 6.57 ಕಿ.ಮೀಟರ್‍ನ ಕೋಣನಕಟ್ಟೆ, ಸುಳುಗೋಡು, ರಾಜಾಪುರ ರಸ್ತೆ ಕಾಮಗಾರಿ ಪ್ರಗತಿಯನ್ನು ವೀಕ್ಷಿಸಿದ ಶಾಸಕರು ಹಂತಹಂತವಾಗಿ ದಿನವಿಡಿ ಕ್ಷೇತ್ರದ ವಿವಿಧ ಭಾಗಗಳಿಗೆ ತೆರಳಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಸಂಬಂಧಪಟ್ಟವರಿಗೆ ಕಾಮಗಾರಿಗಳು ಶೀಘ್ರಗತಿಯಲ್ಲಿ ನಡೆಸಲು ಸೂಚಿಸಿದರು.

30 ಲಕ್ಷ ವೆಚ್ಚದಲ್ಲಿ ಸುಳುಗೋಡು ಗ್ರಾಮದ ಕುರಿಮಾಳ ಪರಿಶಿಷ್ಟ ಜನಾಂಗದ ಕಾಲೋನಿಗೆ ಹೋಗುವ ಕಾಂಕ್ರಿಟ್ ರಸ್ತೆ ಪರಿಶೀಲಿಸಿ ನಂತರ 1 ಕೋಟಿ 73 ಲಕ್ಷ ರೂಪಾಯಿಗಳಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ದೇವನೂರು ಅಣೆಕಟ್ಟು ಕಾಮಗಾರಿಯ ಬಗ್ಗೆ ಮಾಹಿತಿ ಪಡೆದ ಶಾಸಕರು; 40 ಲಕ್ಷ ರೂಪಾಯಿಗಳಲ್ಲಿ ದೇವನೂರು, ಬೆಟ್ಟತೂರು ಕೆರೆ ಕಾಂಕ್ರಿಟ್ ಚಾನಲ್ ನಿರ್ಮಾಣ ಹಾಗೂ ಬೆಟ್ಟತೂರು ಪರಿಶಿಷ್ಟ ಜಾತಿಯ ಕಾಲೋನಿಗೆ ತೆರೆದ ಬಾವಿ ನಿರ್ಮಾಣ, 45 ವಿದ್ಯುತ್ ಕಂಬಗಳ ಅಳವಡಿಕೆ, 25 ಕೆ.ವಿ. ಟ್ರಾನ್ಸ್‍ಫಾರ್ಮರ್ ಅಳವಡಿಕೆ ಕಾಮಗಾರಿಗಳ ಪ್ರಗತಿಯ ಬಗ್ಗೆ ತಿಳಿದುಕೊಂಡ ಶಾಸಕರು ಸಣ್ಣ ನೀರಾವರಿ ಇಲಾಖೆಯ ವತಿಯಿಂದ 76 ಲಕ್ಷ ರೂಪಾಯಿಗಳಲ್ಲಿ ಬೆಟ್ಟತೂರು ಕೆರೆ ನಾಲೆಗೆ 410 ಮೀ ಕಾಂಕ್ರಿಟ್ ಚಾನಲ್ ನಿರ್ಮಾಣದ ಪ್ರಗತಿ ಪರಿಶೀಲಿಸಿ ನಮ್ಮ ರಸ್ತೆ, ನಮ್ಮ ಯೋಜನೆ ಅಡಿಯಲ್ಲಿ 79 ಲಕ್ಷದ ಕಿಸ್ತೂರು, ರಾಜಾಪೂರ, ಕೈನಾಟಿ ರಸ್ತೆ ಕಾಮಗಾರಿ ವೀಕ್ಷಣೆ, 30 ಲಕ್ಷ ಅನುದಾನದ ಕೋಡುಬೈಲು, ಲಕ್ಷ್ಮಣ ತೀರ್ಥ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ನಡೆ ಯುತ್ತಿರುವ ಚೆಕ್ ಡ್ಯಾಂ ಕಾಮಗಾರಿ ಮತ್ತು ಕೆ.ಆರ್.ಡಿ.ಸಿ.ಎಲ್ ಇಲಾಖಾ ವತಿಯಿಂದ ದೇವನೂರು ಗ್ರಾಮದ ಕೀರೆಹೊಳೆಗೆ 2 ಕೋಟಿ 80 ಲಕ್ಷ ಅನುದಾನದಲ್ಲಿ ನೂತನ ಸೇತುವೆ ಕಾಮಗಾರಿ, ಸಾರ್ವಜನಿಕ ಸಹಾಯ ಹಸ್ತದಿಂದ ಬಾಳೆಲೆ ಉಪಠಾಣೆ ಮತ್ತು ವಸತಿ ಗೃಹಗಳ ಕಾಮಗಾರಿಗಳ ವೀಕ್ಷಣೆ, 4 ಕೋಟಿ ರೂಪಾಯಿಗಳಲ್ಲಿ ನಿರ್ಮಿಸಿರುವ ಬಾಳೆಲೆ, ನಿಟ್ಟೂರು, ಕಾರ್ಮಾಡು, ಕಾನೂರು ರಸ್ತೆ ಮತ್ತು ಸೇತುವೆ ಕಾಮಗಾರಿ, 45 ಲಕ್ಷದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಕಾರ್ಮಾಡು ಗೇಟ್ ಬೆಂಡೆಕುತ್ತಿ, ತಟ್ಟಕೆರೆ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿ ತದನಂತರ 1 ಕೋಟಿ ರೂಪಾಯಿಗಳಲ್ಲಿ ನಿರ್ಮಾಣ ವಾಗುತ್ತಿರುವ ವಡ್ಡರಮಾಡು ಕಟ್ಟೆಯ ಗೇಟ್ ತಡೆಗೋಡೆ ಕಾಮಗಾರಿ, ಆರ್.ಎಂ.ಸಿ. ವತಿಯಿಂದ 5 ಲಕ್ಷ ವೆಚ್ಚದಲ್ಲಿ ಮಲ್ಲೂರು ಮಹಲಿಂಗೇಶ್ವರ ದೇವಸ್ಥಾನಕ್ಕೆ ಕಣ ನಿರ್ಮಾಣಕ್ಕೆ ಚಾಲನೆ ನೀಡಿ ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ಕೊಟ್ಟಗೇರಿ, ಕಾರ್ಮಾಡು, ಜಾಗಲೆ, ನೇವರೆ, ಮಲ್ಲೂರು, ನಿಟ್ಟೂರು, ಸುಳುಗೋಡು, ಕೋಣನ ಕಟ್ಟೆ, ಪೆÇನ್ನಪ್ಪಸಂತೆ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಆಗಬೇಕಾದ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭ ಜಿ.ಪಂ. ಮಾಜಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ, ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು, ಆರ್.ಎಂ.ಸಿ ಸದಸ್ಯ ಆದೇಂಗಡ ವಿನು ಚಂಗಪ್ಪ, ತಾಲ್ಲೂಕು ಬಿ.ಜೆ.ಪಿ ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷ ಮಾಪಂಗಡ ಯಮುನಾ ಚಂಗಪ್ಪ, ಬಾಳೆಲೆ ಕೊಡವ ಸಮಾಜ ಅಧ್ಯಕ್ಷ ಮಲ್ಚಿರ ಬೋಸ್ ಮಂದಣ್ಣ, ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಬಾಳೆಲೆ ಸ್ಥಾನೀಯ ಸಮಿತಿ ಅಧ್ಯಕ್ಷ ಸುಕೇಶ್, ವಿ.ಎಸ್.ಎಸ್.ಎನ್ ಅಧ್ಯಕ್ಷ ಕೃಷ್ಣ ಗಣಪತಿ, ನಿಟ್ಟೂರು ಗ್ರಾ.ಪಂ. ಸದಸ್ಯ ಚಕ್ಕೇರ ಸೂರ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಸಣ್ಣ ನೀರಾವರಿ ಇಲಾಖೆಯ ಜಿಲ್ಲಾ ಅಧಿಕಾರಿ ಕಾಂತರಾಜ್, ತಾಲ್ಲೂಕು ಅಧಿಕಾರಿ ರಫೀಕ್, ಜಿ.ಪಂ. ಇಂಜಿನಿಯರ್ ಮಹಾದೇವ್, ಬಿಜೆಪಿ ಹಿರಿಯ ಪ್ರಮುಖರಾದ ಕಾಳಪಂಡ ಸುಧೀರ್, ಆರ್.ಎಂ.ಸಿ. ಅಧ್ಯಕ್ಷ ಸುಜಾ ಬೋಪಯ್ಯ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಚಿತ್ರ, ವರದಿ: ಎನ್.ಎನ್. ದಿನೇಶ್