ಮಡಿಕೇರಿ, ಜೂ. 8: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ವಲಯದಿಂದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಆಸಕ್ತರಿಗೆ ಕೊಡಲ್ಪಡುವ ವೀಲ್‍ಚೇರ್ ಅನ್ನು ಕಡಗದಾಳು ಗ್ರಾಮದ ಕಾವೇರಪ್ಪ ಹಾಗೂ ನಳಿನಿ ದಂಪತಿಯ ಪುತ್ರಿ ಗಾನವಿ ಅವರಿಗೆ ಯೋಜನಾಧಿಕಾರಿ ಸದಾಶಿವಗೌಡ ವಿತರಿಸಿದರು. ಈ ಸಂದರ್ಭ ಕಡಗದಾಳು ಒಕ್ಕೂಟದ ಸೇವಾ ಪ್ರತಿನಿಧಿಗಳಾದ ಎಲ್ಸಿ, ಚಿತ್ರ, ಅಧ್ಯಕ್ಷ ಅರುಣ್‍ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.