ಕುಶಾಲನಗರ, ಜೂ. 8: ಅರಣ್ಯ ಇಲಾಖೆಯ ಅಧಿಕಾರಿಗಳ ವಸತಿಗೃಹದ ಆವರಣದಲ್ಲಿ ಶ್ರೀಗಂಧದ ಮರವೊಂದನ್ನು ಕಳ್ಳರು ಕಡಿದಿರುವ ಘಟನೆ ನಡೆದಿದೆ.
ಕುಶಾಲನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ ಒತ್ತಿನಲ್ಲಿರುವ ಕೊಪ್ಪ ಅರಣ್ಯ ಇಲಾಖೆ ವಸತಿಗೃಹ ಪಟ್ಟಣದ ಹೃದಯ ಭಾಗದಲ್ಲಿದ್ದು ಬೆಳೆದು ನಿಂತಿದ್ದ ಶ್ರೀಗಂಧದ ಮರವೊಂದನ್ನು ಯಾರೋ ಕಳ್ಳರು ಕಡಿದುರುಳಿಸಿದ ದೃಶ್ಯ ಗೋಚರಿಸಿದೆ. ಇಲಾಖೆ ಅಧಿಕಾರಿಗಳು ಮಹಜರು ನಡೆಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.