ಮಾಯಮುಡಿ, ಜೂ.6: ಕ್ಷುಲ್ಲಕ ವಿಚಾರಕ್ಕೆ ಸಂಬಂದಿಸಿದಂತೆ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮತ್ತಿ ಎಂಬಲ್ಲಿ ಎರಡು ಗುಂಪುಗಳ ನಡುವೆ ಪರಸ್ಪರ ಹೊಡೆದಾಟ ನಡೆದಿದ್ದು, ಅಬ್ದುಲ್ ರೆಹಮಾನ್ ಎಂಬ ವ್ಯಕ್ತಿಗೆ ಕತ್ತಿಯಿಂದ ಕೈಗೆ ಕಡಿದು ಗಾಯಗೊಳಿಸಿದ ಹಿನ್ನೆಲೆ ಮಡಿಕೇರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ.
ಬೆಮ್ಮತ್ತಿಯಲ್ಲಿ ಅಲ್ಪಸಂಖ್ಯಾತ ಯುವಕನೊಬ್ಬ ಚೆಡ್ಡಿ, ಬನಿಯನ್ ನಲ್ಲಿ ಓಡಾಡುತ್ತಿದ್ದು ಧರ್ಮಕ್ಕೆ ವಿರೋಧ ಎಂದು ಒಂದು ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದೆ. ನಿನ್ನೆ ಸಂಜೆಯಿಂದ ಕೈ ಕೈ ಮಿಲಾಯಿಸುವದು, ನೂಕಾಟ, ಹಲ್ಲೆ ಪ್ರಕರಣ ನಡೆದಿದ್ದು, ಇಂದು ಬೆಳಿಗ್ಗೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡೂ ಗುಂಪುಗಳ ನಡುವೆ ಕತ್ತಿ, ರಾಡು, ದೊಣ್ಣೆ ಇತ್ಯಾದಿಗಳಿಂದ ಘರ್ಷಣೆಗೆ ಕಾರಣವಾಗಿದೆ.
ಬೆಮ್ಮತ್ತಿಯ ಮೈಮೂಟಿ ಎಂಬವರು ನೀಡಿರುವ ಪುಕಾರಿನ ಮೇರೆಗೆ, ಅಬೂಬಕರ್, ರಾಫಿ, ಬಾಪು, ಜುನೈದ್, ಸಾದಿಕ್, ಆಶಿಫ್ ಹಾಗೂ ಸರ್ಫುದ್ದೀನ್ ವಿರುದ್ದ ಸೆ.307 ರನ್ವಯ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಅಬೂಬಕರ್ ಗೋಣಿಕೊಪ್ಪಲು ಪೆÇಲೀಸರಿಗೆ ನೀಡಿದ ದೂರಿನನ್ವಯ ಬೆಮ್ಮತ್ತಿಯ ಮಹಮ್ಮದ್ ಕುಟ್ಟಿ, ಅಬ್ದುಲ್ ರೆಹಮಾನ್, ಮೊೈದು ಕುಟ್ಟಿ ವಿರುದ್ಧವೂ ಸೆ.307 ರನ್ವಯ ಕೊಲೆಯತ್ನ ದೂರು ದಾಖಲಾಗಿದೆ. ಎರಡು ಗುಂಪುಗಳ ಆರೋಪಿಗಳನ್ನು ಪೆÇಲೀಸರು ಬಂಧಿಸಿ, ಕ್ರಮ ಜರುಗಿಸಿದ್ದಾರೆ. ಘಟನಾ ಸ್ಥಳಕ್ಕೆ ವೀರಾಜಪೇಟೆ ಡಿವೈಎಸ್ ಪಿ ಜಯಕುಮಾರ್, ವೃತ್ತ ನಿರೀಕ್ಷಕ ರಾಮರೆಡ್ಡಿ, ಪೆÇಲೀಸ್ ಉಪ ನಿರೀಕ್ಷಕ ಸುರೇಶ್ ಬೋಪಣ್ಣ ಭೇಟಿ ನೀಟಿ ಪರಿಶೀಲನೆ ನಡೆಸಿದರು.