ಮಡಿಕೇರಿ, ಜೂ. 7: ನಗರದ ರಾಣಿಪೇಟೆಯಲ್ಲಿರುವ ಜಾಮೀಯ ಮಸೀದಿಗೆ ಸೇರಿದ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ವಕ್ಛ್ ಸಮಿತಿ ಅಧ್ಯಕ್ಷ ಕೆ.ಎ. ಯಾಕೂಬ್ ಆರೋಪಿಸಿದ್ದಾರೆ.
ಈ ಸಂಬಂಧ ಖಬರ್ ಸ್ಥಾನ ಜಾಗ ತೆರವಿಗಾಗಿ ಜಿಲ್ಲಾಧಿಕಾರಿ ಅವರಿಗೆ ಕ್ರಮಕ್ಕೆ ಕೋರಿ ದೂರು ಸಲ್ಲಿಸಲಾಗಿದೆ ಎಂದು ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ವೇಳೆ ವಕ್ಛ್ ಅಧಿಕಾರಿ ಸಯ್ಯದ್ ರೆಹಮಾನ್, ಮಸೀದಿ ಕಾರ್ಯದರ್ಶಿ ನೂರುಲ್ ಹುದಾ ಹಾಗೂ ಮೆಹಬೂಬ್ ಪಾಶ ಹಾಜರಿದ್ದರು.