ಸೋಮವಾರಪೇಟೆ, ಜೂ.7: ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಹುದುಗೂರು ಬಳಿಯಲ್ಲಿ ಪಟ್ಟಣದ ಕ್ಲಬ್‍ರಸ್ತೆ ನಿವಾಸಿ ಮುಖೇಶ್ ಚಾಲಿಸುತ್ತಿದ್ದ ಫೋರ್ಡ್ ಕಾರು ನಿಯಂತ್ರಣ ಕಳೆದುಕೊಂಡಿದ್ದು, ರಸ್ತೆ ಬದಿಯಿದ್ದ ದಿಬ್ಬಕ್ಕೆ ಡಿಕ್ಕಿಯಾಗಿ ಮಗುಚಿ ಬಿದ್ದಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಮುಖೇಶ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.