ಕಡಂಗ, ಜೂ. 7 : ಜಿಲ್ಲೆಯ ಪ್ರತಿಷ್ಠಿತ ಸಮನ್ವಯ ನಾಪೆÇೀಕ್ಲು ಸಮೀಪದ ಕೊಟ್ಟಮುಡಿ ಮರ್ಕಝುಲ್ ಹಿದಾಯ ಅದೀನದಲ್ಲಿ ಹಾದಿಯ ಕಾಲೇಜು ಕಟ್ಟಡದ ಶಂಕುಸ್ಥಾಪನೆ ಕರ್ನಾಟಕ ಮುಸ್ಲಿಂ ಜಮಾಹತ್ ಕೊಡಗು ಜಿಲ್ಲಾ ಅಧ್ಯಕ್ಷರಾದ ಕಿಲ್ಲೂರ್ ತಂಘಳ್ ನೆರವೇರಿಸಿದರು

ಈ ಹಾದಿಯಾ ಕೋರ್ಸ್ ಎಂಬುದು ಬಾಲಕಿಯರಿಗೆ ಎಸ್ ಎಸ್ ಎಲ್ಸಿ ನಂತರ ಐದು ವರ್ಷದ ಕೋರ್ಸ್ ಆಗಿದ್ದು ವಸತಿ ವ್ಯವಸ್ಥೆಯೊಂದಿಗೆ ಬೌದ್ಧಿಕ ಹಾಗೂ ಲೌಕಿಕ ಶಿಕ್ಷಣವನ್ನು ಒಳಗೊಂಡಿರುತ್ತದೆ ಈ ಕಟ್ಟಡವು 2022 ರಲ್ಲಿ ಉದ್ಘಾಟನೆ ಯಾಗಲಿದೆ ಎಂದು ಕೊಟ್ಟಮುಡಿ ಮರ್ಕಜ್ ಕಾರ್ಯದರ್ಶಿ ಇಸ್ಮಾಯಿಲ್ ಸÀಖಾಫಿ ಕೊಂಡಂಗೇರಿ ತಿಳಿಸಿದರು

ಈ ಕಾರ್ಯಕ್ರಮದಲ್ಲಿ ಇಲ್ಯಾಸ್ ತಂಘಳ್ ಎಮ್ಮೆಮಾಡು, ಮಹಮ್ಮದ್ ಮುಸ್ಲಿಯಾರ್ ನಾಯಿಬ್ ಖಾಝಿ (ಎಡಪಾಲ) ಕೊಡಗು ಜಿಲ್ಲೆ , ಹಂಸು ಕೊಟ್ಟಮುಡಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು. -ನೌಫಲ್