ವೀರಾಜಪೇm,É ಜೂ. 7 : ವೀರಾಜಪೇಟೆ ಬಳಿಯ ಅಂಬಟಿ ್ಟಗ್ರಾಮದಿಂದ ಅಕ್ರಮವಾಗಿ ಟಿಪ್ಪರ್ ಲಾರಿಯಲ್ಲಿ (ಕೆ.ಎ.12 5516) ಅಕ್ರಮವಾಗಿ ಮರಳು ಸಾಗಿಸುತ್ತಿದ್ದು ದನ್ನು ಪತ್ತೆಹಚ್ಚಿದ ಗ್ರಾಮಾಂತರ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಆರ್. ಮಂಚಯ್ಯ ಮರಳು ಸಮೇತ ಟಿಪ್ಪರ್ ಲಾರಿಯನ್ನು ವಶ ಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ಮರಳನ್ನು ಅಂಬಟ್ಟಿ ಗ್ರಾಮದಿಂದ ವೀರಾಜಪೇಟೆಗೆ ಸಾಗಿಸುತ್ತಿದ್ದುದನ್ನು ಪೊಲೀಸರು ಗಮನಿಸಿ ಲಾರಿ ಚಾಲಕ ಬಿ.ಎ.ಪುನೀತ್ ವಿರುದ್ಧ ಕ್ರಮ ಕೈಗೊಂಡಿದ್ದು, ಆರೋಪಿ ತಲೆಮರೆಸಿಕೊಂಡಿರುವುದಾಗಿ ಗೊತ್ತಾಗಿದೆ. ಎಎಸ್‍ಐ ಶಿವಣ್ಣ, ಪೊಲೀಸ್ ಪೇದೆಗಳಾದ ಸಿ.ವೆಂಕಟೇಶ್, ಜೋಯಪ್ಪ ಹಾಗೂ ನೆಹರೂ ಭಾಗವಹಿಸಿದ್ದರು.