ವೀರಾಜಪೇಟೆ, ಜೂ. 5: ದಕ್ಷಿಣ ಕೊಡಗಿಗೆ ಎರಡು ದಿನಗಳ ಹಿಂದೆ ಮುಂಗಾರು ಪ್ರವೇಶಿಸಿ ಒಂದೇ ದಿನದ ರಾತ್ರಿಯಲ್ಲಿ 3.3 ಇಂಚುಗಳಷ್ಟು ಮಳೆ ಸುರಿದು ದಾಖಲೆ ಮಾಡಿದ್ದ ಆರಂಭದ ಮುಂಗಾರು ನಿನ್ನೆ ದಿನ ಅಪರಾಹ್ನದಿಂದಲೇ ಮಳೆ ಕ್ಷೀಣಗೊಂಡಿದೆ. ನಿನ್ನೆ ದಿನ ರಾತ್ರಿಯೂ ಹಿಂದಿನ ರಾತ್ರಿಯಂತೆ ಭಾರೀ ಮಳೆ ಬೀಳಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗ್ಗಿನಿಂದ ಇಂದು ಬೆಳಗ್ಗಿನ ತನಕ ತುಂತುರು ಮಳೆ ಸುರಿದಿದೆ.