ಮಡಿಕೇರಿ, ಜೂ.5: ಪ್ರಸಕ್ತ(2020-21) ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯಿಂದ ಸರ್ಕಾರ ನಿಗಧಿಪಡಿಸಿದ ದರಗಳಲ್ಲಿ ಬಿತ್ತನೆಗೆ ಯೋಗ್ಯವಾದ, ಮೀನುಮರಿಗಳನ್ನು ಲಭ್ಯತೆಗೆ ಅನುಗುಣವಾಗಿ ವಿತರಿಸಲಾಗುವುದು.

ಆಸಕ್ತ ಕೃಷಿಕರು ತಮ್ಮ ಬೇಡಿಕೆಯನ್ನು ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣೆ-2 ಕಚೇರಿಗಳಲ್ಲಿ ನೊಂದಾಯಿಸಿಕೊಳ್ಳಬೇಕಾಗಿ ಕೋರಿದೆ. ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣಿ-1, ಮಡಿಕೇರಿ ದೂ.ಸಂ. 08272-228773, ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣಿ-2, ಮಡಿಕೇರಿ ದೂ.ಸಂ : 9845909727, ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣಿ-2, ಸೋಮವಾರಪೇಟೆ ದೂ.ಸಂ.08276-295051, ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣಿ-2 ಹಾರಂಗಿ ದೂ.ಸಂ.9886717626 ಹಾಗೂ ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣಿ-2, ಪೊನ್ನಂಪೇಟೆ ದೂ.ಸಂ.08274-261477 ಈ ಮೀನುಗಾರಿಕೆ ಇಲಾಖಾ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.