ಚೆಟ್ಟಳ್ಳಿ, ಜೂ. 5: ಚೇರಳ ಶ್ರೀಮಂಗಲ ಗ್ರಾಮ ಪೊನ್ನತ್ ಮೊಟ್ಟೆಯ ಕೆ.ಎಂ. ಅಚ್ಚಪ್ಪ ಅವರ ತೋಟದ ಮನೆಯಲ್ಲಿ ವಾಸವಿದ್ದ ಆಶಾ (32) ಎಂಬವರು ತಾ. 13.01.2020ರಂದು ಎಂದಿನಂತೆ ಕೂಲಿಕೆಲಸಕ್ಕೆ ತೆರಳಿದವರು ಮನೆ ಬಾರದೆ ಕಾಣೆಯಾದ ಬಗ್ಗೆ 28.01.2020ರಂದು ಆಶಾಳ ಸಂಬಂಧಿಕರು ಪೊಲೀಸ್ ಗ್ರಾಮಾಂತರ ಠಾಣೆ ಮಡಿಕೇರಿಯಲ್ಲಿ ದೂರು ಸಲ್ಲಿಸಿದ್ದಾರೆ. ಎಫ್‍ಐಆರ್ ದಾಖಲಿಸಲಾಗಿದ್ದು ಈವರೆಗೂ ಪತ್ತೆಯಾಗಿರುವುದಿಲ್ಲ. ಕಂಡವರು ಕೂಡಲೇ ಮಡಿಕೇರಿ ಗ್ರಾಮಾಂತರ ಠಾಣೆಗೆ ಅಥವಾ ದೂ.9480556929 ಸಂಪರ್ಕಿಸಲು ಕೋರಲಾಗಿದೆ.