ಮಡಿಕೇರಿ, ಜೂ. 6: ಈ ಹಿಂದೆ ಮಳೆಯ ಕಾರಣದಿಂದಾಗಿ ನದಿಯ ಮೂಲಕ ಕೊಚ್ಚಿಬಂದು ಸೇತುವೆಗೆ ಅಡ್ಡಲಾಗಿ ಸಿಕ್ಕಿಕೊಂಡಿರುವ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ಯನ್ನು ವೀರಾಜಪೇಟೆ ಅರಣ್ಯ ಉಪ ವಿಭಾಗದಿಂದ ನಡೆಸಲಾಗುತ್ತಿದೆ.

ಇದರಂತೆ ಇಂದು ಮಡಿಕೇರಿ-ವೀರಾಜಪೇಟೆ ರಸ್ತೆಯಲ್ಲಿ ಬರುವ ಬೇತರಿ ಸೇತುವೆಯಲ್ಲಿ ಮರ ತೆರವುಗೊಳಿಸುವ ಕೆಲಸವನ್ನು ಅರಣ್ಯ ಇಲಾಖೆ ಕಂದಾಯ ಇಲಾಖೆಯೊಂದಿಗೆ ಸೇರಿ ನಡೆಸಿತು.

ಈ ಸಂದರ್ಭ ವೀರಾಜಪೇಟೆ ಡಿಎಫ್‍ಓ ರೋಶಿನಿ, ಆರ್‍ಎಫ್‍ಓ ದಿಲೀಪ್ ಕುಮಾರ್, ಆರ್‍ಆರ್‍ಟಿ ತಂಡ, ಸಿಬ್ಬಂದಿ ಶಿವರಾಜು, ವೀರಾಜಪೇಟೆ ಕಂದಾಯ ನಿರೀಕ್ಷಕ ಪಳಂಗಪ್ಪ ಪಾಲ್ಗೊಂಡಿದ್ದರು.