ಮಡಿಕೇರಿ, ಜೂ. 5: ಈ ವರ್ಷದ ಬಿದ್ದಂಡ ಪೂವಮ್ಮ-ಅಯ್ಯಪ್ಪ ಸ್ಮಾರಕ ಸಂಗೀತ ಸ್ಪರ್ಧೆಯು ಆನ್‍ಲೈನ್ ಮೂಲಕ ನಡೆಯಲಿದೆ. ಸ್ಪರ್ಧೆಯು ತಾ. 16 ರಂದು ಜರುಗಲಿದೆ. ಕೊಡಗಿನ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಕೊಡಗಿನಲ್ಲೇ ವಾಸವಿರುವ ಪುಟಾಣಿ ಮಕ್ಕಳು ಮಾತ್ರ ಇದರಲ್ಲಿ ಭಾಗವಹಿಸಲು ಅರ್ಹರು. ಈ ಸ್ಪರ್ಧೆಯಲ್ಲಿ ಹಿರಿಯ-ಕಿರಿಯ ಹಾಗೂ ಪುಟಾಣಿಗಳೆಂಬ ಮೂರು ವಿಭಾಗಗಳಿರುತ್ತವೆ.

ಸ್ಪರ್ಧೆಯ ನಿಯಮಗಳು

1. ಹಿರಿಯರು: 16 ಜೂನ್ 1999ರ ನಂತರ ಹುಟ್ಟಿದವರು

2. ಕಿರಿಯರು: 16 ಜೂನ್ 2004ರ ನಂತರ ಹುಟ್ಟಿದವರು

3. ಪುಟಾಣಿಗಳು: 16 ಜೂನ್ 2013ರ ನಂತರ ಹುಟ್ಟಿದವರು

4. ಹಿರಿಯ ವಿಭಾಗದವರು ಪ್ರೇಮಗೀತೆಗಳನ್ನು ಹೊರತುಪಡಿಸಿ ಯಾವುದೇ ಭಾವಪೂರ್ಣ ಕನ್ನಡ ಚಿತ್ರಗೀತೆಯನ್ನು ಹಾಡತಕ್ಕದ್ದು. ಸಮಯ ಮಿತಿ: 3 ನಿಮಿಷ ಮಾತ್ರ.

5. ಕಿರಿಯ ವಿಭಾಗದವರು ಯಾವುದೇ ಕನ್ನಡ ‘ಸುಗ್ಗಿ ಗೀತೆ’ಯನ್ನು ಹಾಡತಕ್ಕದ್ದು. ಸಮಯ ಮಿತಿ: 3 ನಿಮಿಷ ಮಾತ್ರ.

6. ಪುಟಾಣಿ ವಿಭಾಗದವರು ಪ್ರಸ್ತುತ ಯಾ ಭೂತ ಪೂರ್ವ ಕೊಡವ ಕವಿಗಳು ಬರೆದಿರುವ ಕೊಡವ ಭಾಷೆಯ ಹಾಡನ್ನು ಹಾಡಬಹುದಾಗಿದೆ. ಸಮಯ ಮಿತಿ: 3 ನಿಮಿಷ ಮಾತ್ರ.

7. ಯಾವುದೇ ವಿಶೇಷ ದೃಶ್ಯೀಕರಿಸುವ ಉಪಕರಣ (ಕೆಮರಾ)ಗಳನ್ನು ಉಪಯೋಗಿಸದೆ ತಮ್ಮ ಮೊಬೈಲ್‍ಗಳಲ್ಲಿ ನಿರೂಪಿಸಿದ ವಿಡಿಯೋಗಳನ್ನು ತಾ. 15ರ ಮಧ್ಯಾಹ್ನ 12 ರಿಂದ ರಾತ್ರಿ 10 ಗಂಟೆಯ ಒಳಗೆ ಕೆಳಕಂಡ ಮೊಬೈಲ್‍ಗಳಿಗೆ ವಾಟ್ಸಾಪ್ ಮೂಲಕ ರವಾನಿಸಬೇಕು.

ಹಿರಿಯ ವಿಭಾಗ: 9741283515

ಕಿರಿಯರ ವಿಭಾಗ: 9480653098

ಪುಟಾಣಿಗಳ ವಿಭಾಗ: 9449476147

8. ಪ್ರತಿ ಸ್ಪರ್ಧಾಳು ಒಂದು ಅಗಲವಾದ ಬಿಳಿ ಹಾಳೆಯ ಮೇಲೆ ಕಪ್ಪು ಶಾಹಿಯಲ್ಲಿ ದಪ್ಪವಾದ ಅಕ್ಷರದಲ್ಲಿ ತನ್ನ ಹೆಸರು, ಹುಟ್ಟಿದ ದಿನ, ತಿಂಗಳು, ವರ್ಷ, ಹಾಡು ರಚಿಸಿದವರು ಹೆಸರು, ಇವುಗಳನ್ನು ಬರೆದು, ತಾನು ಧರಿಸಿದ ಬಟ್ಟೆಯ ಮೇಲೆ ಯಾ ಒಂದು ರಟ್ಟಿನ ಮೇಲೆ ಅಂಟಿಸಿ ಸ್ಪಷ್ಟವಾಗಿ ಕಾಣುವಂತಲ್ಲಿ ಇಟ್ಟು ತನ್ನ ಹಾಡನ್ನು ವೀಡಿಯೋ ಮಾಡಬೇಕು.

9. ಹಾಡಿನ ಜೊತೆಯಲ್ಲಿ ವಾದ್ಯಗಳಿಗೆ ಆಕ್ಷೇಪಣೆ ಇಲ್ಲ. ಆದರೆ ವೀಡಿಯೋ ಮಾಡುವಾಗ ಜೊತೆಯಲ್ಲಿ ನುಡಿಸುತ್ತಿರುವ ಯಾವುದೇ ವಾದ್ಯವನ್ನು ಪ್ರದರ್ಶಿಸುವಂತಿಲ್ಲ.

10. ಸ್ಪರ್ಧಾಳು ಏಕಾಂಗಿಯಾಗಿ ಒಂದು ಬಿಳಿಯ ಹಿನ್ನೆಲೆಯ ಮುಂದೆ ನಿಂತು ಅಥವಾ ನೆಲದ ಮೇಲೆ ಕುಳಿತುಕೊಂಡು ಹಾಡತಕ್ಕದ್ದು.

11. ಈ ಸ್ಪರ್ಧೆಯ ವಿವರಗಳಲ್ಲಿ ಯಾವುದೇ ಸಂಶಯ, ಅನುಮಾನಗಳಿದ್ದರೆ ಕೆಳಕಂಡ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಮೊ. 9448721249, 9480653098, 9480557100, 9448366715. ತೀರ್ಪುಗಾರರ ತೀರ್ಮಾನ ಅಂತಿಮ ಎಂದು ಅಧ್ಯಕ್ಷೆ ಕೆ. ಸೌಭಾಗ್ಯ ಪೊನ್ನಪ್ಪ ತಿಳಿಸಿದ್ದಾರೆ.