ಸೋಮವಾರಪೇಟೆ, ಜೂ. 6: ಕಳೆದ ಮೇ 19ರ ರಾತ್ರಿ ಪಟ್ಟಣ ಸಮೀಪದ ಹುಲ್ಲೂರಿಕೊಪ್ಪದಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಬೆಂಕಿ ಹಚ್ಚಿದ ನಿಜವಾದ ಆರೋಪಿಗಳನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿರುವ ಶನಿವಾರಸಂತೆ ಗ್ರಾ.ಪಂ. ಮಾಜೀ ಅಧ್ಯಕ್ಷ ಎಸ್.ಎನ್. ರಘು ಅವರು, ತಪ್ಪಿದಲ್ಲಿ ಹೋರಾಟ ನಡೆಸಲಾಗು ವದು ಎಂದು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲ್ಲೂರಿ ಕೊಪ್ಪದಲ್ಲಿ ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಅಮಾಯಕರಾದ ಸಕಲೇಶಪುರದ ರಘು, ಶನಿವಾರ ಸಂತೆಯ ಧನಂಜಯ್, ಭರತ್, ಪತ್ರಕರ್ತ ಹರೀಶ್ ಅವರುಗಳ ವಿರುದ್ಧ ಎಫ್‍ಐಆರ್ ದಾಖಲಿಸ ಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ತನಿಖೆ ನಡೆಸಿ ನೈಜ ಅಪರಾಧಿಗಳನ್ನು ಬಂಧಿಸಬೇಕಿದೆ. ಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಪ್ರಸಾದ್, ಯೋಗೇಶ್ ಉಪಸ್ಥಿತರಿದ್ದರು.