ಕೂಡಿಗೆ, ಜೂ. 5: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ವಸಾಹತು ಕಾಲೋನಿಯಲ್ಲಿರುವ ಆಸ್ಪತ್ರೆಯನ್ನು ಕಾವೇರಿ ನೀರಾವರಿ ನಿಗಮದ ವಶದಿಂದ ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ ವಿಷಯವಾಗಿ ಜಿಲ್ಲೆಯ ಉಸ್ತುವಾರಿ ಸಚಿವ ವಿ. ಸೋಮಣ್ಣನವರಿಗೆ ಹಾರಂಗಿ, ಹುಲುಗಂದ ಗ್ರಾಮಸ್ಥರು ಮನವಿ ಪತ್ರವನ್ನು ಹಾರಂಗಿ ನಿರೀಕ್ಷಣಾ ಮಂದಿರದಲ್ಲಿ ನೀಡಿದರು.

ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಗುಂದ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವಸಾಹತು ಜಾಗದಲ್ಲಿ ನೀರಾವರಿ ನಿಗಮದವರು ಇದರ ನಿರ್ವಹಣೆ ಮಾಡುತ್ತಿದ್ದು, ಅಸ್ಪತ್ರೆ ಯಲ್ಲಿ ಸೂಕ್ತ ವೈದ್ಯಕೀಯ ಉಪಕರಣಗಳು ಹಾಗೂ ಔಷಧಿಗಳು ಮತ್ತು ಮಾತ್ರೆಗಳು ಲಭ್ಯವಿಲ್ಲದೆ ಹಾಗೂ ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದ ಕೊರತೆಯಿದ್ದು , ಇದರ ನಿರ್ವಹಣೆ ಮಾಡಲು ಕಾವೇರಿ ನೀರಾವರಿ ನಿಗಮದಿಂದ ಸಾಧÀ್ಯವಾಗುತ್ತಿಲ್ಲಾ ಅಲ್ಲದೆ ಈ ಗ್ರಾಮ ಸಮೀಪದಲ್ಲಿ ಯಡವನಾಡು ಅತ್ತೂರು ಗ್ರಾಮದ ಜನರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ದೊರೆಯದೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಭಾಸ್ಕರ್ ನಾಯ್ಕ್ ಸೇರಿದಂತೆ ಯಡವನಾಡು, ಅತ್ತೂರು, ಗ್ರಾಮದ ಅನೇಕ ಗ್ರಾಮಸ್ಥರು ಸಚಿವರಿಗೆ ಮನವಿಯನ್ನು ಸಲ್ಲಿಸಿದರು.

ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲು ಮನವಿ