ಸಂತ ಜೋಸೆಫರ ಶಾಲೆ ಬಳಿಯ ಮೈದಾನದಲ್ಲಿ ಆಚರಣೆ

ನಿನ್ನೆ ನಡೆದ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅತಿಥಿಗಳಾದ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಅವರುಗಳೊಂದಿಗೆ, ಒಂದನೇ ಅಪರ ಸೆಷನ್ ನ್ಯಾಯಾಧೀಶ ಚಂದ್ರಶೇಖರ್, ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ್, ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‍ಸಿ ಬಿ.ಕೆ. ಮನು, ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಸ್ಮಿತಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜಿ. ಕಾರ್ಯಪ್ಪ, ಸ್ಕೌಟ್ ಮತ್ತು ಗೈಡ್ ಆಯುಕ್ತ ಬೇಬಿ ಮ್ಯಾಥ್ಯು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ-ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಗಣೇಶನ್, ಉಪ ಪರಿಸರ ಅಧಿಕಾರಿ ಡಾ. ಎಂ.ಕೆ. ಸುಧಾ, ವಕೀಲರ ಸಂಘದ ಉಪಾಧ್ಯಕ್ಷÀ ಪ್ರೀತಮ್, ಪ್ರಮುಖರಾದ ಟಿ.ಪಿ. ರಮೇಶ್, ಅನಿತಾ ಪೂವಯ್ಯ, ಸ್ಕೌಟ್ ಮತ್ತು ಗೈಡ್ಸ್‍ನ ಆಯುಕ್ತರಾದ ಜಿಮ್ಮಿ ಸಿಕ್ವೇರಾ, ಧಮಯಂತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ, ಮಂಜುನಾಥ್, ಶಿಕ್ಷಕ ಟಿ.ಜಿ. ಪ್ರೇಮ್‍ಕುಮಾರ್, ಮಹಾಗಣಪತಿ ಸೇವಾ ಸಮಿತಿಯ ಮಹೇಶ್ ಜೈನಿ, ಕಾನೆಹಿತ್ಲು ಮೊಣ್ಣಪ್ಪ, ಕೆ.ಆರ್. ರವಿ, ಸಂತ ಜೋಸೆಫರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೋಸಾ ಹಾಗೂ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.

ನೂತನ ಗ್ರಂಥಾಲಯದ ಆವರಣದಲ್ಲಿ ಆಚರಣೆ

ನೂತನ ಸಾರ್ವಜನಿಕ ಗ್ರಂಥಾಲಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಸಚಿವ ಸೋಮಣ್ಣ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿ ಮನುಷ್ಯನು, ಪ್ರಾಣಿ, ಪಕ್ಷಿ ಸೇರಿದಂತೆ ಜಲಚರಗಳೊಂದಿಗೆ ವಾಸ ಮಾಡಲು ಕಲಿಯಬೇಕು. ಹಾಗಾದಾಗ ಭೌಗೋಳಿಕವಾಗಿ ಸಮತೋಲನ ಕಾಣಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೇರಳದಲ್ಲಿ ಇತ್ತೀಚೆಗೆ ನಡೆದ ಆನೆ ಹತ್ಯೆ ಘಟನೆ ಖಂಡಿಸಿದ ಅವರು, ಸಾಂಕೇತಿಕವಾಗಿ ಗಿಡ ನೆಟ್ಟರು. ಈ ಸಂದರ್ಭ ಸಂಸದÀ ಪ್ರತಾಪ್ ಸಿಂಹ, ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಗ್ರೀನ್ ಸಿಟಿ ಫೋರಂನ ಸತ್ಯ, ಮೋಂತಿ ಗಣೇಶ್ ಇತರರು ಇದ್ದರು.

ಹಾರಂಗಿಯಲ್ಲಿ ಪರಿಸರ ದಿನಾಚರಣೆ

ಕೂಡಿಗೆ: ಮನುಷ್ಯ ಪ್ರಕೃತಿಯ ನಿಯಮದ ಅಡಿಯಲ್ಲಿ ಜೀವನ ಸಾಗಿಸಬೇಕೇ ಹೊರತು ಹಾಳು ಮಾಡುವ ಕೆಲಸಕ್ಕೆ ಹೋಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟರು. ಅವರು ಹಾರಂಗಿ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪರಿಸರ ಸಂರಕ್ಷಣೆಯೊಂದಿಗೆ ವನ್ಯಜೀವಿಗಳ ಉಳಿವಿಗೂ ಕೂಡ ಅವಕಾಶವನ್ನು ಕಲ್ಪಿಸಬೇಕು. ಪರಿಸರದ ನಿಯಮವನ್ನು ಅರಿತು ಜೀವನ ಸಾಗಿಸಬೇಕು ಎಂದರು. ಈ ಸಂದರ್ಭ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಪರಿಸರ ಉಳಿಸುವುದರಲ್ಲಿ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ. ಕರ್ನಾಟಕ ಸಂಪತ್ತುಭರಿತ ರಾಜ್ಯವಾಗಿದೆ. ಕರ್ನಾಟಕಕ್ಕೆ ಬೆಂಗಳೂರು ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಬೆಂಗಳೂರಿಗೆ ಕೊಡಗು ಮುಖ್ಯವಾಗಿರುತ್ತದೆ. ಕೊಡಗಿನಿಂದ ಕಾವೇರಿ ನೀರು ಬೆಂಗಳೂರಿಗೆ ಹೋಗುತ್ತದೆ. ಕರ್ನಾಟಕದ ಹಿತದೃಷ್ಟಿಯಿಂದ ಕೊಡಗನ್ನು ಉಳಿಸಬೇಕು ಎಂದರು. ಈ ಸಂದರ್ಭ ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್, ಸಹಾಯಕ ಅಭಿಯಂತರ ನಾಗರಾಜ್ ಇಂಜಿನಿಯರ್ ಕಿರಣ್, ಪರಿಸರ ರಕ್ಷಣಾ ಬಳಗದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಸಚಿವರ ವಿಶೇಷ ಅಧಿಕಾರಿ ಸ್ವಾಮಿ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಬಾಸ್ಕರ್ ನಾಯಕ್, ತಹಶೀಲ್ದಾರ್ ಗೋವಿಂದರಾಜ್, ತಾಲೂಕು ಪಂಚಾಯತಿ ಅಧಿಕಾರಿ ಸುನಿಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು.

ಸೋಮವಾರಪೇಟೆ

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ, ತಾಲೂಕು ಕಚೇರಿ, ಪೊಲೀಸ್ ಇಲಾಖೆಯ ವತಿಯಿಂದ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಜೆ.ಎಂ.ಎಫ್.ಸಿ. ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್. ದಿಂಡಲಕೊಪ್ಪ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ, ಆರ್.ಎಫ್.ಒ. ಶಮಾ, ಪಿ.ಎಸ್.ಐ. ಶಿವಶಂಕರ್ ಇದ್ದರು.ಸಿ.ಎನ್.ಸಿ.ಯಿಂದ ದೇವಾಟ್ ಪರಂಬ್‍ನಲ್ಲಿ ಆಚರಣೆ

ಸಿ.ಎನ್.ಸಿ (ಕೊಡವ ನ್ಯಾಷನಲ್ ಕೌನ್ಸಿಲ್) ಆಶ್ರಯದಲ್ಲಿ ದೇವಾಟ್ ಪರಂಬ್ ನರಮೇಧ ಸಮಾಧಿ ಸ್ಥಳದಲ್ಲಿ ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಿಸಲಾಯಿತು. ಈ ಸಮಾಧಿ ಸ್ಥಳದಲ್ಲಿ ಗೌರವಾಂಜಲಿ ಅರ್ಪಿಸಿ ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಅವರಿಂದ ಕೊಡವರ ನೇತೃತ್ವದಲ್ಲಿ ಆ¯, ಅರಳಿ ಮತ್ತು ಬಿದಿರು ಗಿಡಗಳನ್ನು ನೆಡಲಾಯಿತು. ತದ ನಂತರ ಸಿ.ಎನ್.ಸಿ.ಯ ಪ್ರಧಾನ ಭೂ-ರಾಜಕೀಯ ಆಶೋತ್ತರವಾದ ಕೊಡವ ಲ್ಯಾಂಡ್ ಅಟೋನಮಿ ಮತ್ತು ಕೊಡವ ಬುಡಕಟ್ಟಿಗೆ ಆದಷ್ಟು ಶೀರ್ಘದಲ್ಲಿ ಯಶಸ್ಸು ದೊರಕಲಿ ಎಂದು ಅಗಲಿದ ಪೂರ್ವಿಕರ ದಿವ್ಯಾತ್ಮಗಳಿಂದ ವಿಶೇಷ ಆಶೀರ್ವಾದ ಮತ್ತು ಶಕ್ತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕಲಿಯಂಡ ಪ್ರಕಾಶ್, ಮಂದಪಂಡ ಮನೋಜ್, ಅರೆಯಡ ಗಿರೀಶ್ ಭಾಗವಹಿಸಿದ್ದರು.

ಸಾಮಾಜಿಕ ಜಾಲತಾಣದ ಮೂಲಕ ಆಚರಣೆ

ಪೊನ್ನಂಪೇಟೆ: ಕೊರೊನಾ ಹಿಮ್ಮೆಟ್ಟುವ ಸಲುವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಆಚರಣೆಗೆ ಮಹತ್ವ ನೀಡಲಾಯಿತು. ಪದ್ಯಗಳ ಸಾಲು, ನೆಟ್ಟ ಗಿಡದೊಂದಿಗೆ ಫೋಟೋ, ವೀಡಿಯೋ ತೆಗೆದು, ಗಿಡ, ಮರ ರಕ್ಷಣೆಗೆ ಪ್ರೋತ್ಸಾಹಕರ ಸಂದೇಶ ವ್ಯಕ್ತವಾದವು. ಕೊಡಗಿನವರ ಪರಿಸರ ಪ್ರೀತಿಗೆ ವೈರಸ್ ಅಡ್ಡಿಯಾಗಲಿಲ್ಲ. ಸಾಹಿತ್ಯದ ಮೂಲಕವೂ ಪರಿಸರ ಕೃಷಿ ಜಾಗೃತಿ ಮೂಡಿ ಬಂತು. ಕಲಾವಿದೆ ಪುತ್ತಾಮನೆ ವಿದ್ಯಾ ಜಗದೀಶ್ ಹೊಸ ಚಿಂತನೆಯಲ್ಲಿ ‘ಪ್ರಕೃತಿಯೊಂದಿಗೆ ಮಾತು’ ಎಂಬ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣದ ಮೂಲಕ ಕೊಡವ ಭಾಷೆಯಲ್ಲಿ ಆರಂಭಿಸಿ, ಚಾಲನೆ ನೀಡಿ ವಿಶೇಷ ಮೆರಗು ನೀಡಿದರು. ಪ್ರಕೃತಿ ಪ್ರೀತಿ ಹೆಚ್ಚಿಸಲು ತನ್ನ ಮನೆಯ ಸುತ್ತಲಿನ ಸೀಬೆ, ಮಾವುಗಳೊಂದಿಗೆ ಬಾಲ್ಯದಲ್ಲಿ ಕಳೆದ ನೆನಪುಗಳನ್ನು ಜನರೊಂದಿಗೆ ಹಂಚಿಕೊಂಡರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಅವರಣದಲ್ಲಿ ಏಲಕ್ಕಿ ಗಿಡ ನೆಟ್ಟರು. ವಾರಕೊಮ್ಮೆ ಇಂತಹ ವೀಡಿಯೋ ಚಿತ್ರಣ ನೀಡುವ ಮೂಲಕ ವರ್ಷಪೂರ್ತಿ ಪರಿಸರಕ್ಕೆ ಗೌರವ ಕೊಡಲು ಮುಂದಾಗಿದ್ದಾರೆ. ಮರಗಳನ್ನು ಪೋಷಿಸಲು ಸಲಹೆ ನೀಡಿರುವ ಇವರು, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಉದ್ಯೋಗಿ ಕೂಡ.

ಕುಶಾಲನಗರದಲ್ಲಿ ಆಚರಣೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರ ಹಸಿರೀಕರಣ ಯೋಜನೆಯಡಿ ಪಟ್ಟಣದ ಬಡಾವಣೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ಅರಣ್ಯ ಇಲಾಖೆ, ಕುಶಾಲನಗರ ಪಟ್ಟಣ ಪಂಚಾಯಿತಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ, ತಾಲೂಕು ಸಾಮಾಜಿಕ ಅರಣ್ಯ ಇಲಾಖೆ, ಕುಶಾಲನಗರ ಅರಣ್ಯ ವಲಯ ಅರಣ್ಯಾಧಿಕಾರಿಗಳ ಕಚೇರಿಯ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ತಾಲೂಕು ಜೀವಿ ವೈವಿಧ್ಯ ನಿರ್ವಹಣಾ ಮಂಡಳಿ ಹಾಗೂ ಆದಿಶಂಕರಾಚಾರ್ಯ ಬಡಾವಣೆಯ ಹಸಿರು ಪಡೆಯ ಸಹಯೋಗದಲ್ಲಿ ಕುಶಾಲನಗರ ಪಟ್ಟಣದ ಆದಿಶಂಕರಾಚಾರ್ಯ ಮತ್ತು ಅವಧಾನಿ ಬಡಾವಣೆಯ ಮೈದಾನದ ಬಳಿ “ಮಾಲಿನ್ಯ ನಿಯಂತ್ರಿಸಿ : ಜೀವಿ ವೈವಿಧ್ಯ ಉಳಿಸಿ” ಎಂಬ ಉದ್ಘೋಷಣೆಯಡಿ ಏರ್ಪಡಿಸಿದ್ದ ನಗರ ಹಸಿರೀಕರಣ ಯೋಜನೆಗೆ ಪಟ್ಟಣದ ಬಡಾವಣೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪರಿಸರ ದಿನ ಮಹತ್ವ ಕುರಿತು ಮಾತನಾಡಿದ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕರೂ ಆದ ಕಾರ್ಯಕ್ರಮ ಸಂಘಟಕ ಟಿ.ಜಿ. ಪ್ರೇಮಕುಮಾರ್, ನೆಲ, ಜಲ, ಅರಣ್ಯ, ಜೀವಿ ವೈವಿಧ್ಯ ಸಂರಕ್ಷಣೆಯೊಂದಿಗೆ ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಿದೆ ಎಂದರು. ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯು ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಸಹಕಾರದೊಂದಿಗೆ ಪಟ್ಟಣದಲ್ಲಿ ಕಳೆದ 6 ವರ್ಷಗಳಿಂದ ಪಟ್ಟಣದಲ್ಲಿ ಗಿಡ ನೆಡುವ ಕಾರ್ಯದಲ್ಲಿ ತೊಡಗಿದೆ. ಪ್ರತಿಯೊಬ್ಬರೂ ಮನೆ ಬಳಿ ಗಿಡ ನೆಟ್ಟು ಬೆಳೆಸುವ ಮೂಲಕ ಪಟ್ಟಣದಲ್ಲಿ ಸ್ವಚ್ಛ, ಸುಂದರ ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಗಿಡನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಎಂ. ಸುಜಯ್ ಕುಮಾರ್, ಪ್ರತಿಯೊಬ್ಬರೂ ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು. ಪಟ್ಟಣದಲ್ಲಿ ಗಿಡನೆಟ್ಟು ಬೆಳೆಸುವ ಈ ಯೋಜನೆಗೆ ಪಂಚಾಯಿತಿ ವತಿಯಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಕಲೀಮುಲ್ಲ ಪರಿಸರ ದಿನಾಚರಣೆಯ ಮಾಹಿತಿಯ ಕರಪತ್ರ ಬಿಡುಗಡೆಗೊಳಿಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಂ. ಸುಜಯ್ ಕುಮಾರ್, ಹಿರಿಯ ನಾಗರಿಕ ಎಂ.ಹೆಚ್. ನಜೀರ್ ಅಹ್ಮದ್ ಗಿಡ ನೆಡುವ ಮೂಲಕ ಪರಿಸರ ಆಂದೋಲನಕ್ಕೆ ಚಾಲನೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಹೆಚ್.ಎಸ್. ರಾಜಶೇಖರ್ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ಆರೋಗ್ಯ ನಿರೀಕ್ಷಕ ಉದಯ್ ಕುಮಾರ್, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎನ್.ವೆಂಕಟನಾಯಕ್, ಪದಾಧಿಕಾರಿಗಳಾದ ಜಿ. ಶ್ರೀನಾಥ್, ಜಿ. ಶ್ರೀಹರ್ಷ, ಟಿ.ವಿ. ಶೈಲಾ, ನಿವೃತ್ತ ಉಪನ್ಯಾಸಕ ಕೆ.ವಿ. ಉದಯ್, ವಕೀಲ ಆರ್.ಕೆ. ನಾಗೇಂದ್ರಬಾಬು, ಪಂಚಾಯ್ತಿ ನೈರ್ಮಲೀಕರಣದ ಮೇಲ್ವಿಚಾರಕ ಹೆಚ್.ಎನ್. ಮೋಹನ್ ಕುಮಾರ್, ಸಂಘಟನೆಗಳ ಪ್ರಮುಖರಾದ ಟಿ.ಎಸ್. ಶಾಂಭಮೂರ್ತಿ, ಹೆಚ್.ಪಿ. ಉದಯ್, ಎನ್.ಡಿ. ಯೋಗೇಶ್, ಟಿ.ಬಿ. ಮಂಜುನಾಥ್, ಹೆಚ್.ಜಿ. ಕುಮಾರ್, ಕೆ.ಬಿ. ರಾಜು, ಮಹಿಳಾ ಸಂಘಟನೆಯ ಪ್ರಮುಖರು, ಹಸಿರು ಪಡೆ ಕಾರ್ಯಕರ್ತರು ಇದ್ದರು.

ಸುಂಟಿಕೊಪ್ಪ ಗ್ರಾ.ಪಂ.: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಕಸ ವಿಲೇವಾರಿಗಾಗಿ ಮೀಸಲಿಟ್ಟ ಜಾಗದ ಉಳಿಕೆ ಜಾಗದಲ್ಲಿ ಸಸ್ಯ ಪ್ರಭೇದದ ಜಾಷಧಿ ಗಿಡ ಹಾಗೂ ಹಣ್ಣಿನ ಗಿಡಗಳನ್ನು ನೆಡಲಾಯಿತು. ಟಾಟಾ ಕಾಫಿ ಸಂಸ್ಥೆಯಿಂದ ಕಸ ವಿಲೇವಾರಿಗಾಗಿ 2 ಎಕರೆ ಜಾಗವನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ನೀಡಲಾಗಿದು,್ದ ಇದರಲ್ಲಿ 1 ಎಕರೆಯಲ್ಲಿ ಕಸ ವಿಲೇವಾರಿ 1 ಎಕರೆಯಲ್ಲಿ ಗ್ರಾ.ಪಂ. ಉದ್ಯಾನವನ ರೀತಿಯಲ್ಲಿ ಬೇಲಿಯನ್ನು ನಿರ್ಮಿಸಿ ಜಾಷಧಿ ಹಾಗೂ ಹಣ್ಣಿನ ಗಿಡಗಳನ್ನು ನೆಡಲಾಯಿತು. ಗ್ರಾ.ಪಂ. ಪಿಡಿಓ ವೇಣುಗೋಪಾಲ್ ಮಾತನಾಡಿ, ಈ ಜಾಗದಲ್ಲಿ ಸಾರ್ವಜನಿಕ ಔಷಧಿಯ ಗಿಡಗಳನ್ನು ನೆಟ್ಟು ಪೋಷಿಸಬಹುದು. ಗಿಡಗಳ ರಕ್ಷಣೆ ಜವಾಬ್ದಾರಿ ಸಾರ್ವಜನಿಕರ ಮೇಲಿದೆ, ಕೇವಲ ಪಂಚಾಯಿತಿಗೆ ಸಂಬಂಧಿಸಿದ ಸಸ್ಯ ಕ್ಷೇತ್ರವೆಂದು ಭಾವಿಸಬೇಡಿ ಎಂದರು. ಗ್ರಾಮ ಪಂಚಾಯಿತಿ ವತಿಯಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರೂ. 3. ಲಕ್ಷ ವೆಚ್ಚದಲ್ಲಿ ಬೇಲಿಯನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ 5 ಸಾವಿರ ಲೀಟರ್ ಸಾಮಥ್ರ್ಯದ 2 ನೀರಿನ ಟ್ಯಾಂಕ್ ಅಳವಡಿಸಿ ಹನಿ ನೀರಾವರಿ ಯನ್ನು ಅಳವಡಿಸಲಾಗುವುದು ಎಂದು ಹೇಳಿದರು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಗ್ರಾ.ಪಂ. ಉಪಾಧ್ಯಕ್ಷÀ ಪಿ.ಆರ್. ಸುಕುಮಾರ್, ಸದಸ್ಯರುಗಳಾದ ಕೆ.ಇ. ಕರೀಂ, ರಜಾಕ್, ಸಿ. ಚಂದ್ರ, ನಾಗರತ್ನ ಸುರೇಶ್, ರತ್ನಾ ಸಿಬ್ಬಂದಿಗಳಾದ ಪುನೀತ್, ಶ್ರೀನಿವಾಸ್ ಹಾಗೂ ಪೌರ ಕಾರ್ಮಿಕರು ಆಟೋ ಚಾಲಕರ ಸಂಘದ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್, ಬ್ಲೂ ಬಾಯ್ಸ್ ಯೂತ್ ಕ್ಲಬ್ ಮಾಜಿ ಅಧ್ಯಕ್ಷ ಆಲಿಕುಟ್ಟಿ ಮತ್ತಿತರರು ಇದ್ದರು.ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಕೇಂದ್ರ ಸಂಪಾಜೆ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ದಿನಾಚರಣೆಯನ್ನು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಚರಿಸಲಾಯಿತು. ಈ ಸಂದರ್ಭ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಚೆದ್ಕಾರ್, ಉಪಾಧ್ಯಕ್ಷ ಸುಂದರ್ ಬಿಸಿಲುಮನೆ, ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿನೀತ್, ಉದ್ಭವ ಟ್ರಸ್ಟ್ ಅಡಳಿತಾಧಿಕಾರಿ ಮಲ್ಲಿಕಾರ್ಜುನ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಪಿ.ಜೆ. ರಾಘವ ಹಾಗೂ ವಿಜಯೇಂದ್ರ, ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಕೇಂದ್ರ ಸಂಪಾಜೆ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ದಿನಾಚರಣೆಯನ್ನು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಚರಿಸಲಾಯಿತು. ಈ ಸಂದರ್ಭ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಚೆದ್ಕಾರ್, ಉಪಾಧ್ಯಕ್ಷ ಸುಂದರ್ ಬಿಸಿಲುಮನೆ, ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿನೀತ್, ಉದ್ಭವ ಟ್ರಸ್ಟ್ ಅಡಳಿತಾಧಿಕಾರಿ ಮಲ್ಲಿಕಾರ್ಜುನ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಪಿ.ಜೆ. ರಾಘವ ಹಾಗೂ ವಿಜಯೇಂದ್ರ, ಕಾರ್ಯನಿರ್ವಹಣಾಧಿಕಾರಿ ಸುನಿಲ್, ಅರಣ್ಯ ಇಲಾಖೆಯ ಅಧಿಕಾರಿ ನಮನ್ ನಾಯ್ಕ್, ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ, ಸೀಗೆಹೂಸೂರು ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ದಿನೇಶ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಶಾಲಾ ಶಿಕ್ಷಕರು ಅಭಿವೃದ್ಧಿ ಅಧಿಕಾರಿ ಶಿಲ್ಪಾ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಮಾಲ್ದಾರೆ: ಮಾಲ್ದಾರೆ ಕುಶಾಲನಗರ ವಲಯ ಅರಣ್ಯ ಇಲಾಖೆ ಮತ್ತು ಜನಪರ ಸಂಘಟನೆ ಮಾಲ್ದಾರೆ ಇವರುಗಳÀ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅತಿಥಿಗಳಾಗಿ ಅರಣ್ಯ ಇಲಾಖೆಯ ಮಂಜುನಾಥ್ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜನಪರ ಸಂಘದ ಅದ್ಯಕ್ಷ ಅಂತೋಣಿ, ಅರಣ್ಯ ಇಲಾಖೆಯ ಮಣಿಕಂಠ, ರಾಜೇಶ್, ಶಶಿ, ಪ್ರವೀಣ್, ಕೃಷ್ಣಪ್ಪ, ಸ್ಥಳೀಯರಾದ ಕುಂಜಣ್ಣ, ಗಣೇಶ್, ಪ್ರಸನ್ನ ಮತ್ತಿತರು ಹಾಜರಿದ್ದರು.

ಎಸ್.ಕೆ.ಎಸ್.ಎಸ್.: ಜಿಲ್ಲಾ ಎಸ್.ಕೆ.ಎಸ್.ಎಸ್. ವತಿಯಿಂದ ಎಲ್ಲಾ ಶಾಖೆಗಳಲ್ಲಿ ನಡೆಯುವ ಪರಿಸರ ದಿನಾಚರಣೆಯ ಉದ್ಘಾಟನೆಯನ್ನು, ಜಿಲ್ಲಾ ಎಸ್.ಕೆ.ಎಸ್.ಎಸ್. ಸಂಚಾಲಕ ಅಬ್ದುಲ್ ಕರೀಂ ಮುಸ್ಲಿಯಾರ್ ಅವರಿಗೆ ಕೊಡಗು ಜಿಲ್ಲಾ ಸಮಸ್ತದ ನೇತಾರ ಉಸ್ಮಾನ್ ಹಾಜಿಯವರು ಗಿಡವನ್ನು ನೀಡುವ ಮೂಲಕ ನಡೆಸಲಾಯಿತು. ಆಕ್ಟೀವ್ ವಿಂಗ್ ಸದಸ್ಯರಾದ ಶಮೀರ್ ಹಾಗೂ ಷಂಶುದ್ದೀನ್ ಭಾಗವಹಿಸಿದರು.ಪೊನ್ನಂಪೇಟೆ ಜೆ.ಸಿ.ಐ.: ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಪೊನ್ನಂಪೇಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ವಾಸುವರ್ಮ ಮತ್ತು ಬಿ.ಎಂ. ವಿಜಯ ಅವರು ಗಿಡನೆಡುವ ಮೂಲಕ ಉದ್ಘಾಟಿಸಿದರು. ನಂತರ ಶಾಲೆಯ ಕ್ರೀಡಾಂಗಣದ ಸುತ್ತ ಜೆಸಿಐನ ಸದಸ್ಯರು ಹಾಗೂ ಪೂರ್ವ ಅಧ್ಯಕ್ಷರು ನೆಲ್ಲಿ, ಸೀಬೆ, ಸಂಪಿಗೆ, ಹೊಂಗೆ, ಮಹಗನಿ ಸೇರಿದಂತೆ ವಿವಿಧ ರೀತಿಯ ಗಿಡಗಳನ್ನು ನೆಟ್ಟರು. ಅಲ್ಲದೇ ಕಾರ್ಯಕ್ರಮಕ್ಕೆ ಆಗಮಿಸಿದ ಪದಾಧಿಕಾರಿಗಳಿಗೆ ಗಿಡಗಳನ್ನು ವಿತರಿಸಲಾಯಿತು. ಜೆಸಿಐ ಅಧ್ಯಕ್ಷ ಜೆ.ಸಿ. ಗಯ ಜೋಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರುಗಳಾದ ಎಂ.ಎಂ. ಅಶೋಕ್, ಎಂ.ಬಿ. ಬೋಪಣ್ಣ, ರೋಬಿನ್ ಸುಬ್ಬಯ್ಯ, ನಿರನ್ ಮೊಣ್ಣಪ್ಪ, ಅರಸು ನಂಜಪ್ಪ, ಕೆ.ಎಂ. ನಟೇಶ್, ಮುದ್ದಪ್ಪ, ಸಿ.ಕೆ. ತಮ್ಮಯ್ಯ, ದಿಲನ್ ಚಂಗಪ್ಪ, ಪಿ.ಬಿ. ನಟೇಶ್, ಪಿ.ಪಿ. ಪವನ್, ಗಣೇಶ್ ಉತ್ತಪ್ಪ, ಉತ್ತಪ್ಪ ಪುಟ್ಟಂಗಡ, ದಾದು ಪೂವಯ್ಯ ಹಾಗೂ ಮತ್ತಿತರರು ಹಾಜರಿದ್ದರು.

ಸಿದ್ದಾಪುರ ಶಾಲೆ: ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಲೆಕ್ಕಾಧಿಕಾರಿ ಗುರು ದರ್ಶನ್, ಗ್ರಾಮ ಪಂಚಾಯಿತಿ ಸದಸ್ಯ ರಜಿತ್ ಕುಮಾರ್ ಮುಖ್ಯಶಿಕ್ಷಕಿ ಪ್ರಸನ್ನ, ಶಿಕ್ಷಕ ಮಣಿಕಂಠ ಹಾಜರಿದ್ದರು.

ನಾಪೆÇೀಕ್ಲು: ನಾಪೆÇೀಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಮಾತನಾಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ, ಪ್ರತಿಯೊಬ್ಬರೂ ತಮ್ಮ ಪರಿಸರದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ನೆರವಾಗಬೇಕು ಎಂದರು. ಈ ಸಂದರ್ಭ ಶಾಲೆಯ ಉಪಪ್ರಾಂಶುಪಾಲೆ ಪಿ.ಕೆ.ನಳಿನಿ, ಶಿಕ್ಷಕಿ ಕಸ್ತೂರಿ, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಚಾಳಿಯಂಡ ಜಗದೀಶ್, ಸುಶೀಲಮ್ಮ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಹಾಗೂ ಸಿಬ್ಬಂದಿಗಳು ಇದ್ದರು.

ವೀರಾಜಪೇಟೆ: ವೀರಾಜಪೇಟೆ ಸಮೀಪದ ಬಿಳುಗುಂದ ಸರಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಮೂಕೊಂಡ ವಿಜು ಸುಬ್ರಮಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಲೀಮಾ, ಸದಸ್ಯರಾದ ಪ್ರತಾಪ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್, ಮುಖ್ಯ ಶಿಕ್ಷಕಿ ಬಿಂದು ಕೆ.ಆರ್., ಪಂಚಾಯಿತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ದಿನಾಚರಣೆಯ ಅಂಗವಾಗಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಸುಂಟಿಕೊಪ್ಪ: ಸುಂಟಿಕೊಪ್ಪ ಜೆಸಿಐ ಸಂಸ್ಥೆ, ನಮ್ಮ ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆ ತಂಡದ ವತಿಯಿಂದ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ರಮೇಶ್ ವಹಿಸಿದ್ದರು. ಮುಖ್ಯ ಭಾಷಣಕರರಾಗಿ ಪುಟಾಣಿ ಶ್ರೀಶ ಮಾತನಾಡಿ, ವಿಶ್ವ ಪರಿಸರ ಒಂದು ದಿನಕ್ಕೆ ಸಿಮೀತವಾಗದೆ, ನಮ್ಮ ದೈನಂದಿನ ಚಟುವಟಿಕೆಯಾಗಬೇಕು ನೀರನ್ನು ಮಿತವಾಗಿ ಬಳಸುವ ಮೂಲಕ ಅಂತರ್‍ಜಲವನ್ನು ಸಂರಕ್ಷಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀರನ್ನು ದುಬಾರಿ ಹಣಕೊಟ್ಟು ಖರೀದಿಸುವ ಕಾಲ ಬರಲಿದೆ. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಅಲ್ಲದೆ ಪ್ರತಿ ಮನೆಗಳಲ್ಲಿ ಸಸಿ ಹಾಗೂ ಮರಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಕಾಪಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕಂದಾಯ ಪರೀವಿಕ್ಷಕ ಶಿವಪ್ಪ, ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ, ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮ?