ಗೋಣಿಕೊಪ್ಪ ವರದಿ, ಜೂ.6: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ವತಿಯಿಂದ ಅನ್ವೇಷಣೆ ಪ್ರತಿಭಾ ಶೋಧ ಸ್ಪರ್ಧೆ ಆನ್ಲೈನ್ ಮೂಲಕ ನಡೆಸಲಾಯಿತು.
ವಿವಿಧ ಜಿಲ್ಲೆಯ ಪಿ.ಯು.ಸಿ ವಿಜ್ಞಾನ ವಿಭಾಗದ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜೇತರು : ಮೈಸೂರು ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಪಿ. ವಿದಿಷ ಪೊನ್ನಪ್ಪ ಪ್ರಥಮ, ಮೈಸೂರು ಎಸ್. ಬಿ. ಆರ್. ಆರ್. ಮಹಾಜನ ಪಿ.ಯು ಕಾಲೇಜಿನ ವಿದ್ಯಾರ್ಥಿ ದೇವ್ಜಿತ್ ಹಲ್ದಾರ್ ದ್ವಿತೀಯ ಸ್ಥಾನ ಪಡೆದುಕೊಂಡರು.
ಪ್ರಥಮ ಬಹುಮಾನವಾಗಿ ರೂ. 50 ಸಾವಿರ, ದ್ವಿತೀಯ ಬಹುಮಾನವಾಗಿ ರೂ. 40 ಸಾವಿರ ನಗದು ಹಾಗೂ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಲಾ ರೂ. 10 ಸಾವಿರದಂತೆ ವಿದ್ಯಾರ್ಥಿವೇತನವನ್ನು ನೀಡಲಾಯಿತು.
ಈ ಸಂದರ್ಭ ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸಿ. ಪಿ ಬೆಳ್ಯಪ್ಪ, ಪ್ರಾಂಶುಪಾಲೆ ಪಿ.ಸಿ ಕವಿತ, ಕಾರ್ಯಕ್ರಮ ಸಂಚಾಲಕ ಡಾ. ಎಸ್. ಎಸ್ ದಿವಾಕರ್ ಇದ್ದರು.