ಸುಂಟಿಕೊಪ್ಪ, ಜೂ. 4: ಮಳೆಗಾಲದಲ್ಲಿ ತೋಡುನೀರು ತುಂಬಿ ಅಸುಪಾಸಿನ ಮನೆಗಳಿಗೆ ಕೊಳಚೆ ಹಾಗೂ ಮಳೆ ನೀರು ನುಗ್ಗದಂತೆ ತೋಡಿನ ಸುತ್ತ ಮುತ್ತ ಹೂಳೆತ್ತುವ ಕಾಮಗಾರಿಯನ್ನು ನಡೆಸಲಾಗುತ್ತಿದ್ದು ಸ್ಥಳಕ್ಕೆ ಕೊಡಗು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗುಡೂರು ಬೀಮಸೇನಾ ಸೋಮವಾರ ಭೇಟಿನೀಡಿ ಪರಿಶೀಲನೆ ನಡೆಸಿದರು. ಖದೀಜ ಉಮ್ಮ ಮದರಸ ದಿಂದ ನಾರ್ಗಾಣೆ ಗ್ರಾಮದ ಬೈಮನ ತಿಮ್ಮಯ್ಯ ಎಂಬ ಮನೆಯ ಸಮೀಪದ ವರೆಗೆ ಇರುವ ತೋಡಿನಲ್ಲಿ ನೀರು ಹರಿಯದೆ ಹೂಳು ತುಂಬಿ ಹೋಗಿತ್ತು. ಇದರಿಂದ ಕಳೆದ ಕೆಲವು ವರ್ಷಗಳಿಂದ ಈ ಭಾಗದ ಬಡಾವಣೆಯ ಮನೆಗಳಿಗೆ ಮಳೆಗಾಲದಲ್ಲಿ ನಿರಂತರವಾಗಿ ನೀರು ಹರಿದು ಸಮಸ್ಯೆ ಉಂಟಾಗುತ್ತಿತ್ತು, ಇದನ್ನು ಗಮನಿಸಿದ ಸುಂಟಿಕೊಪ್ಪ ಗ್ರಾ.ಪಂ. ನರೇಗಾ ಅನುದಾನದಲ್ಲಿ ರೂ. 5 ಲಕ್ಷ ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿಯನ್ನು ನಡೆಸುತ್ತಿದೆ. ನರೇಗಾ ಎಂಜಿನಿಯರ್ ನಿಶಾರಾಣಿ, ಗ್ರಾ. ಪಂ. ಪಿಡಿಒ ವೇಣುಗೋಪಾಲ್, ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಸದಸ್ಯರಾದ ಎ.ಶ್ರೀಧರ್ ಕುಮಾರ್, ನಾಗರತ್ನ, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ ಇತರರು ಇದ್ದರು.