ನಾಪೆÇೀಕ್ಲು, ಜೂ. 4: ಒಂದೆಡೆ ಕೊರೊನಾ, ಮತ್ತೊಂದೆಡೆ ಲಾಕ್‍ಡೌನ್. ಜನ ಮನೆಯಿಂದಲೇ ಹೊರಬರಲು ಹೆದರುವ ಪರಿಸ್ಥಿತಿ. ಆದರೆ ಕುಡುಕರಿಗಿಲ್ಲ ಭೀತಿ ಎನ್ನುವದಕ್ಕೆ ಇಲ್ಲಿದೆ ಸಾಕ್ಷಿ.

ಜಿಲ್ಲೆಯಲ್ಲಿಯೇ ಖ್ಯಾತಿ ಪಡೆದ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತಾವು ದೇವಳ ರಸ್ತೆಯಲ್ಲಿ ಈಗ ಕುಡುಕರದ್ದೇ ಹಾವಳಿ. ರಸ್ತೆ ಬದಿಯಲ್ಲಿಯೇ ಮೋಜು, ಮಸ್ತಿ, ತ್ಯಾಜ್ಯಗಳ ವಿಲೇವಾರಿ ಕಂಡುಬರುತ್ತಿದೆ. ರಸ್ತೆಯಲ್ಲಿ ವೇಗದ ವಾಹನ ಓಡಾಟ ಕೂಡ ನಡೆಯುತ್ತಿದ್ದು, ಅಪಘಾತದÀ ಭಯ ಎದುರಾಗಿದೆ ಎಂದು ದೂರುತ್ತಾರೆ ಬೇತು ಗ್ರಾಮಸ್ಥರು.

ಬೇತು ಮಕ್ಕಿ ಶ್ರೀ ಶಾಸ್ತವು ದೇವಳ ಸಂಪರ್ಕ ರಸ್ತೆಯಿಂದ ದೇವಳದ ಮೂಲಕ ಸಾಗಿ ಕಕ್ಕಬ್ಬೆ ಹೊಳೆಗೆ ನೂತನವಾಗಿ ನಿರ್ಮಿಸಲಾದ ಸೇತುವೆವರೆಗೆ ಪ್ರತೀ ದಿನ ಕುಡುಕರ ತಂಡ ಮೋಜು ಮಸ್ತಿಯಲ್ಲಿ ತೊಡಗಿರುತ್ತಾರೆ. ಕಕ್ಕಬ್ಬೆ ಹೊಳೆ ಬದಿಯಲ್ಲಿ ಇವರ ಕಾಟ ಹೆಚ್ಚು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಪೆÇಲೀಸರಿಗೆ ತಲೆ ನೋವಾದ ಸಮಸ್ಯೆ: ಇಲ್ಲಿನ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ನಾಪೆÇೀಕ್ಲು ಪೆÇಲೀಸರ ಗಮನಕ್ಕೆ ತಂದಿದ್ದಾರೆ. ಅದರಂತೆ ಸಂಜೆ ಹೊತ್ತಿನಲ್ಲಿ ಪೆÇಲೀಸರು ಈ ರಸ್ತೆಯಲ್ಲಿ ಸಾಗಿ ತಪಾಸಣೆ ನಡೆಸುತ್ತಿದ್ದಾರೆ. ಆದರೆ ಪೆÇಲೀಸರ ಆಗಮನದ ಮುನ್ಸೂಚನೆ ಅರಿತ ಕುಡುಕರ ತಂಡ ಪಾರಾಣೆ ರಸ್ತೆ ಮೂಲಕ ಪರಾರಿಯಾಗುತ್ತಿದ್ದಾರೆ. ಇದು ಪೆÇಲೀಸರಿಗೆ ಸಮಸ್ಯೆಯಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

-ಪಿ.ವಿ.ಪ್ರಭಾಕರ್