ಕೂಡಿಗೆ, ಜೂ. 4: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಕಸ ವಿಲೇವಾರಿ ಘಟಕದ ಪ್ರಾರಂಭದ ವಿರುದ್ಧ ಅಲ್ಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಇದರ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಸುನಿಲ್ ಮತ್ತು ಅವರ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಅಲ್ಲಿನ ದಿÀಡ್ಡಳ್ಳಿ ಪುನರ್ವಸತಿ ಕೇಂದ್ರದ ಪ್ರಮುಖರೊಂದಿಗೆ ಕಸ ವಿಲೇವಾರಿ ಘಟಕ ಪ್ರಾರಂಭದ ಸಾಧಕ ಭಾದಕಗಳ ಬಗ್ಗೆ ಚರ್ಚೆ ನಡೆಸಿದರು.

ಬಳಿಕ ಮಾತಾನಾಡಿ, ಈಗಾಗಲೇ ಗ್ರಾಮ ವಿಕಾಸ ಯೋಜನೆಯ ಅಡಿಯಲ್ಲಿ 10 ಲಕ್ಷ ರೂ ಹಣವನ್ನು ಕಾದಿರಿಸಲಾಗಿದೆ. ಅಲ್ಲದೆ ಹಾಡಿ ಜನರ ಅಭಿಪ್ರಾಯವನ್ನು ತೆಗೆದುಕೊಂಡು ಮೊದಲು ಒಣಕಸ ಮತ್ತು ಹಸಿ ಕಸವನ್ನು ಬೇರೆ ಮಾಡಿ ಯಾವುದೆ ತೊಂದರೆ ಆಗದಂತೆ ಕಾಮಗಾರಿಯನ್ನು ಮಾಡಲು ತೀರ್ಮಾನ ಕೈಗೊಳ್ಳಲಾಗಿತು.ಆದರೆ ಇದೀಗ ಗ್ರಾಮಸ್ಥರಿಂದ ಬದಲಿ ಜಾಗದಲ್ಲಿ ಮಾಡಲು ಒತ್ತಾಯ ಮಾಡುತ್ತಿರುವುದರಿಂದ ಅವರ ಅಭಿಪ್ರಾಯವನ್ನು ತೆಗೆದುಕೊಂಡು ಮುಂದಿನ ದಿನಗಳಲ್ಲಿ ಸೂಕ್ತ ರೀತಿಯಲ್ಲಿ ಕ್ರಮ ವಹಿಸುವುದಾಗಿ ತಿಳಿಸಿದರು. ಈ ಸಂದರ್ಭ ಗ್ರಾಮ ಪಂಚಾಯತಿ ಅಧಿಕಾರಿ ಶಿಲ್ಪಾ ಸೇರಿದಂತೆ ಅಲ್ಲಿನ ಹಾಡಿ ಪ್ರಮುಖರು ಹಾಜರಿದ್ದರು.