ಶನಿವಾರಸಂತೆ, ಜೂ. 4: ಕೊಡ್ಲಿಪೇಟೆ ಹೋಬಳಿ ಬೆಸೂರು ಪಂಚಾಯಿತಿ ವ್ಯಾಪ್ತಿಯ ಆಗಳಿ ಗ್ರಾಮದ ನಿವಾಸಿಗಳಾದ ಸುಬ್ಬಯ್ಯ ಮಗ ಎ.ಎಸ್. ತೇಜೇಶ್ ಮನೆಯವರಿಗೂ ಗ್ರಾಮದ ಇನ್ನೊಂದು ಗುಂಪಿನವರಿಗೂ ಊರುಡುವೆ ಜಾಗದ ವಿಚಾರವಾಗಿ ಜಗಳವಾಗಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ಆಗಳ್ಳಿ ಗ್ರಾಮದ ತೇಜೇಶ್ ಮನೆಯವರಿಗೂ ಇನ್ನೊಂದು ಗುಂಪಿನವರಿಗೂ ಊರುಡುವೆ ಜಾಗದ ವಿಚಾರವಾಗಿ ವೈಮನಸ್ಸು ಇದ್ದು, ತಾ. 3 ರಂದು ತೇಜೇಶ್ ಮಧ್ಯಾಹ್ನ ಊಟ ಮುಗಿಸಿ ಗದ್ದೆಗೆ ಹೋಗುತ್ತಿರುವಾಗ ಲಕ್ಷ್ಮಣ, ಮಗ ಪ್ರಣಾಮ್, ಪತ್ನಿ ಭಾಗ್ಯ, ಗಿರೀಶ್, ಹರೀಶ್, ಹೂವಪ್ಪ ದಾರಿ ತಡೆದು ಏಕಾಏಕಿ ದೊಣ್ಣೆ ಮತ್ತು ಕತ್ತಿಯಿಂದ ಬಲಗೈ ಮತ್ತು ದೇಹದ ಇತರ ಭಾಗಗಳಿಗೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಗಾಯಾಳುವನ್ನು ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ದಾಖಲುಗೊಳಿಸಲಾಗಿ, ತೇಜೇಶ್ ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್ ಕಾಲಂ 341, 324, 506 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿದ್ದಾರೆ.