ಕಡಂಗ, ಜೂ. 4: ಸಹಸ್ರಾರು ವಿದ್ಯಾ ಸಂಪನ್ನರ ಸೃಷ್ಟಿಗೆ ಕಾರಣರಾದ ಮೂಲತಃ ಎಮ್ಮೆಮಾಡಿನವರಾದ ಮಾಸ್ಟರ್ ಅಹ್ಮದ್ ಅವರು ಇತ್ತೀಚೆಗೆ ಹುದ್ದೆಯಿಂದ ಬಿಡುಗಡೆಗೊಂಡಿದ್ದು, ಈ ಪ್ರಯುಕ್ತ ಸ್ಥಳೀಯ ಎಮ್ಮೆಮಾಡು ಶಾಖೆ ವತಿಯಿಂದ ಇವರ ಸ್ವಗೃಹದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಸ್ಎಸ್ಎಫ್ ವತಿಯಿಂದ ಸನ್ಮಾನ ಏರ್ಪಡಿಸಲಾಯಿತು.
ಈ ಸಂದರ್ಭ ಶಾಖಾ ಅಧ್ಯಕ್ಷ ನಝಿರ್ ಬಾಖವಿ, ಕಾರ್ಯದರ್ಶಿ ನವ್ವಾರ್, ಕೋಶಾಧಿಕಾರಿ ಹಾರಿಸ್ ಮುಸ್ಲಿಯಾರ್, ಎಸ್ಎಸ್ಎಫ್ ಜಿಲ್ಲಾ ಸಮಿತಿ ಸದಸ್ಯ ಶೌಕತ್ ಹಾಗೂ ಅಹ್ಮದ್ ಅವರ ಕೌಟುಂಬಿಕ ಆಪ್ತರು ಕೂಡ ಉಪಸ್ಥಿತರಿದ್ದರು.