ಮಡಿಕೇರಿ, ಜೂ. 4: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 41 ರಂತೆ ಗ್ರಾಮ ಪಂಚಾಯತಿ ಸದಸ್ಯರ ಅವಧಿಯು 5 ವರ್ಷಗಳಿಗೆ ನಿಗಧಿಪಡಿಸಿದ್ದು, ಪ್ರಕರಣ 42 ರಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಹುದ್ದೆಯ ಅವಧಿಯು ಗ್ರಾಮ ಪಂಚಾಯತಿಯ ಪ್ರಥಮ ಸಭೆಗೆ ಗೊತ್ತುಪಡಿಸಿದ ದಿನಾಂಕದಿಂದ ಪ್ರಾರಂಭವಾಗಿ 5ವರ್ಷಗಳ ಅವಧಿಯವರೆಗೆ ಇರುತ್ತದೆ.

ಪ್ರಸ್ತುತ ಕೆಲವು ಗ್ರಾಮ ಪಂಚಾಯತಿಗಳ ಅವಧಿ ಪೂರ್ಣಗೊಂಡಿದ್ದು, ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳು ಸರ್ಕಾರದ ಮುಂದಿನ ನಿರ್ದೇಶನದವರೆಗೆ ಯಾವುದೇ ಸಭೆಗಳು ಮತ್ತು ಹಣಕಾಸಿನ ವ್ಯವಹಾರವನ್ನು ಮಾಡಬಾರದೆಂದು ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕದ ಎಲ್ಲಾ ಗ್ರಾ.ಪಂ. ಗಳಿಗೆ ನಿರ್ದೇನ ನೀಡಿದೆ,