ಮಡಿಕೇರಿ, ಜೂ. 4: ಕೊಡಗಿನ ಭೂ ಪರಿವರ್ತನೆಗೆ ಇಂದಿನಿಂದ ಅವಕಾಶ ನೀಡಲಾಗುತ್ತದೆ ಎಂದು ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ಹೇಳಿದರು.ಜಂಬೂರಿನಲ್ಲಿ ಸಂತ್ರಸ್ತರಿಗೆ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭೂಕುಸಿತ ಸಂಭವಿಸುವ ಪ್ರದೇಶ ಹಾಗೂ ಅಪಾಯಕಾರಿ ಸ್ಥಳಗಳನ್ನು ಹೊರತು ಪಡಿಸಿ ಉಳಿದೆಡೆ ಭೂಪರಿವರ್ತನೆ ಮಾಡಲು ತಾನು ಆದೇಶ ಹೊರಡಿಸುವದಾಗಿ ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ಶಾಸಕ ಬೋಪಯ್ಯ ವಿನಾಕಾರಣ ಷರತ್ತುಗಳನ್ನು ವಿಧಿಸಿ ಭೂಪರಿವರ್ತನೆಗೆ ಅವಕಾಶ ನೀಡುವದಾದರೆ ತಾವು ನೀಡಿದ ಆದೇಶವನ್ನು ಹಿಂತೆಗೆದುಕೊಳ್ಳಿ ಎಂದರು. ಯಾವದೇ ರೀತಿಯ ಅನಗತ್ಯ ಷರತ್ತುಗಳನ್ನು ಭೂಪರಿವರ್ತನೆಗೆ ಸಂಬಂಧಿಸಿದಂತೆ ತಾನು ವಿಧಿಸಿಲ್ಲ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದರು. ಕೊಡಗಿನಲ್ಲಿ ಹಲವಷ್ಟು ಅಭಿವೃದ್ಧಿ ಕೆಲಸಗಳಿಗೆ ಭೂ ವಿಜ್ಞಾನಿ ಅಡ್ಡಿಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಬೋಪಯ್ಯ ಇದು ಸರಿಯಲ್ಲ. ಅಧಿಕಾರಿಗಳ ನಿಲುವು ಬದಲಾಗಬೇಕೆಂದರು.

ಭವನ ನಿರ್ಮಾಣಕ್ಕೆ 10 ಕೋಟಿ ಅತಿವೃಷ್ಟಿ ಸಂದರ್ಭ ಕೊಡಗಿನಲ್ಲಿ ನಿರ್ಗತಿಕರಾಗುವ ಮಂದಿಗೆ ರಕ್ಷಣೆ ನೀಡುವದಕ್ಕಾಗಿ ಶಾಶ್ವತವಾಗಿ ಸಕಲ ಸೌಲಭ್ಯಗಳನ್ನೊಳಗೊಂಡ ಭವನವೊಂದನ್ನು ನಿರ್ಮಿಸಲು ತಮ್ಮ ಮೊದಲ ಪುಟದಿಂದ) ಇಲಾಖೆಯಿಂದ 10 ಕೋಟಿ ಅನುದಾನ ನೀಡುವದಾಗಿ ಘೋಷಿಸಿದ ಸಚಿವ ಅಶೋಕ್ ಮಳೆಗಾಲದ ಸಂದರ್ಭ ಈ ಭವನವನ್ನು ಬಳಸಿಕೊಂಡು ಉಳಿದ ಸಂದರ್ಭಗಳಲ್ಲಿ ಜಿಲ್ಲಾಡಳಿತದ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳಬಹುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬೋಪಯ್ಯ, ಸಚಿವ ಅಶೋಕ್

ಅವರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಇನ್ನೆಂದಿಗೂ ಪ್ರಾಕೃತಿಕ ವಿಕೋಪ ಸಂಭವಿಸದಂತೆ ಎಲ್ಲಾ ದೇವರುಗಳನ್ನು ನಾವೆಲ್ಲರೂ ಪ್ರಾರ್ಥಿಸೋಣವೆಂದರು.