ಸೋಮವಾರಪೇಟೆ, ಜೂ.3: ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್-ಇ ಯೋಜನೆಯಡಿ ಯಲ್ಲಿ ರೂ. 1.75 ಕೋಟಿ ವೆಚ್ಚದ ಚಿಕ್ಕತೋಳೂರು-ಜೇನಿಗರಕೊಪ್ಪ ರಸ್ತೆ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿ ಪೂಜೆ ನೆರವೇರಿ ಸುವ ಮೂಲಕ ಚಾಲನೆ ನೀಡಿದರು.

ಕೊರೊನಾ ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರ ಕೊಡಗಿನ ಅಭಿವೃದ್ಧಿಗೆ ಅನುದಾನ ಒದಗಿಸುತ್ತಿದ್ದು, ಕ್ಷೇತ್ರದಾದ್ಯಂತ ರಸ್ತೆ ಕಾಮಗಾರಿಗಳು ಚಾಲನೆಯಲ್ಲಿವೆ. ಜೇನಿಗರಕೊಪ್ಪದಿಂದ ಚಿಕ್ಕತೋಳೂರು ವರೆಗಿನ 3.05 ಕಿ.ಮೀ. ರಸ್ತೆ ಕಾಮಗಾರಿಗೆ ರೂ. 1.75 ಕೋಟಿ ಅನುದಾನ ನೀಡಲಾಗಿದೆ ಎಂದರು. ಇದರಲ್ಲಿ 2.700 ಕಿ.ಮೀ. ಡಾಂಬರು ರಸ್ತೆ, 350 ಮೀಟರ್ ಕಾಂಕ್ರೀಟ್ ರಸ್ತೆ ಸೇರಿದಂತೆ 7 ಮೋರಿಗಳ ನಿರ್ಮಾಣ ನಡೆಯ ಲಿದೆ. ಹನ್ನೆರಡೂವರೆ ಅಡಿ ಅಗಲದ ರಸ್ತೆ ನಿರ್ಮಾಣವಾಗಲಿದ್ದು, ಈ ರಸ್ತೆ ಕನಿಷ್ಟ 15 ವರ್ಷ ಬಾಳಿಕೆ ಬರ ಬೇಕಿದೆ. ರಸ್ತೆಗೆ ಅಗತ್ಯವಾಗಿರುವ ಚರಂಡಿ ನಿರ್ಮಾಣಕ್ಕೆ ಸ್ಥಳೀಯರೇ ಜಾಗ ಬಿಟ್ಟುಕೊಡಬೇಕು ಎಂದು ಶಾಸಕ ರಂಜನ್ ಮನವಿ ಮಾಡಿ ದರು. ಈ ಸಂದರ್ಭ ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತಾ. ಪಂ. ಸದಸ್ಯ ಧರ್ಮಪ್ಪ, ಗ್ರಾ.ಪಂ. ಸದಸ್ಯೆ ಕುಸುಮಾವತಿ, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ರೇವಪ್ಪ, ಪ್ರಮುಖರಾದ ಜಯಣ್ಣ, ಗುತ್ತಿಗೆದಾರ ಪುರುಷೋತ್ತಮ್, ಎಇಇ ಮೋಹನ್‍ಕುಮಾರ್, ಅಭಿಯಂತರ ರಮಣಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.