ಕುಟ್ಟ, ಜೂ. 3; ಕುಟ್ಟಾದ ಅನುಗ್ರಹ ಪೆಟ್ರೋಲ್ ಪಂಪ್ ಬಳಿ ರಾತ್ರಿ ಅಂದಾಜು 3ರ ಸಮಯದಲ್ಲಿ ಸೂರ್ಯ ಅವರ ಮನೆಯಿಂದ ಚಿರತೆಯೊಂದು ಕೋಳಿಯನ್ನು ಕೊಂದು ತೆಗೆದುಕೊಂಡು ಹೋಗಿರುವುದು ಪತ್ತೆಯಾಗಿದೆ. ಕುಟ್ಟ ಗ್ರಾಮದಲ್ಲಿ ರಾತ್ರಿ ಹುಲಿ ಬಂದಿತ್ತು ಎನ್ನುವ ಸುದ್ದಿ ಹಬ್ಬಿದ್ದು, ರಸ್ತೆ ಬದಿಯಲ್ಲಿ ಹೆಜ್ಜೆಗುರುತು ಕಂಡು ಬಂದಿರುತ್ತದೆ. ಅದರ ಚಿತ್ರವನ್ನು ನೋಡಿ ನಾಗರಹೊಳೆ ಅರಣ್ಯ ಆರ್ಎಫ್ಓ ಅಮಿತ್ ಮತ್ತು ನಾಗರಹೊಳೆ ಅರಣ್ಯ ವಾರ್ಡನ್ ಬೋಸ್ ಮಾದಪ್ಪ ಅವರು ಗುರುತಿಸಿದ್ದು, ಅದು ಹುಲಿಯ ಹೆಜ್ಜೆಯ ಗುರುತು ಅಲ್ಲ, ಚಿರತೆಯದ್ದು ಎಂದು ಸ್ಪಷ್ಟಪಡಿಸಿದ್ದಾರೆ.