ಕೂಡಿಗೆ, ಜೂ, 3: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಸನ ಹೆದ್ದಾರಿಯ, ಜೋಡಣೆ ರಸ್ತೆಯಿಂದ, ಶಿರಂಗಾಲ ಗ್ರಾಮಕ್ಕೆ ಸಂಪರ್ಕ ನೀಡುವ ಕಾಂಕ್ರೀಟ್ ರಸ್ತೆ ಕಾಮಗಾರಿ ನೆಡೆಯತ್ತಿದೆ.

ಈ ರಸ್ತೆಯು ತೀರ ಹದಗೆಟ್ಟಿದ್ದರಿಂದ ಗ್ರಾಮಸ್ಥರು, ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದರು.

ನೀರಾವರಿ ಇಲಾಖೆಯ ರೂ.80 ಲಕ್ಷ ವೆಚ್ಚದ ಕ್ರಿಯಾಯೋಜನೆಯ ಅನುಮೋದನೆ ಪ್ರಕಾರ ಶಿರಂಗಾಲದ ಸಂತೆ ಮಾಳದವರೆಗೆ ಎರಡು ಕಿಲೋ ಮೀಟರ್ ವರೆಗೆ ಕಾಂಕ್ರೀಟ್ ರಸ್ತೆಯ ಕಾಮಗಾರಿ ನೆಡೆಯುತ್ತಿದೆ.