ವೀರಾಜಪೇಟೆ, ಜೂ. 3: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸ್ವಚ್ಛತಾ ವಿಭಾಗದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಮೇ 31ಕ್ಕೆ ವಯೋನಿವೃತ್ತಿ ಹೊಂದಿದ ಶಂಕರ್ ಹಾಗೂ ಕಾವೇರಮ್ಮ ಅವರುಗಳನ್ನು ಇಂದು ಪಟ್ಟಣ ಪಂಚಾಯಿತಿಯ ಅಧಿಕಾರಿಗಳು, ಸಿಬ್ಬಂದಿ, ಪಟ್ಟಣ ಪಂಚಾಯಿತಿ ಸದಸ್ಯರುಗಳು ಬೀಳ್ಕೊಟ್ಟರು.
ಇಬ್ಬರು ನೌಕರರ ಬೀಳ್ಕೊಡುಗೆ ಪ್ರಯುಕ್ತ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಅಭಿಯಂತರ ಎನ್.ಪಿ.ಹೇಮ್ಕುಮಾರ್, ರೆವಿನ್ಯೂ ಅಧಿಕಾರಿ ಸೋಮೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಎಸ್.ಎಚ್.ಮತೀನ್ ಪಟ್ಟಣದ ಸ್ವಚ್ಛತೆಯ ಮಹತ್ವದ ಸೇವೆಯ ಕುರಿತು ಮಾತನಾಡಿದರು.
ಅತಿಥಿಗಳಾಗಿ ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ಪಾಲ್ಗೊಂಡಿದ್ದರು. ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಎಂ.ಕೆ.ದೇಚಮ್ಮ, ಕೆ.ಬಿ.ಹರ್ಷವರ್ಧನ್, ಪಟ್ಟಡ ರಂಜಿ ಪೂಣಚ್ಚ ಹಾಗೂ ಮಹಮ್ಮದ್ ರಾಫಿ ಹಾಗೂ ಕಚೇರಿಯ ಸಿಬ್ಬಂದಿ ಹಾಜರಿದ್ದರು. ಕಚೇರಿಯ ಸಿಬ್ಬಂದಿ ಸುಲೇಖಾ ನಿರೂಪಿಸಿದರು.