ಮಡಿಕೇರಿ, ಜೂ. 3 : ಮಳೆಗಾಲ ಸಂದರ್ಭ ಪ್ರತಿ ವರ್ಷ ಜಿಲ್ಲೆಯ ಭಾಗಮಂಡಲದಲ್ಲಿ, ಕಾವೇರಿ ನದಿಯ ಮಟ್ಟ ಏರಿ ದೇವಾಲಯದ ಒಳಗೂ ನೀರು ಸೇರುತ್ತದೆ. ಸ್ಥಳೀಯರು ಸುತ್ತಮುತ್ತ ಸಂಚರಿಸಲು ದೋಣಿಗಳನ್ನು ಬಳಸಬೇಕಾಗುವ ಪರಿಸ್ಥಿತಿಯೂ ಎದುರಾಗುತ್ತದೆ. ಇದನ್ನು ತಪ್ಪಿಸಲು ಲೋಕೋಪಯೋಗಿ ಇಲಾಖೆಯಿಂದ ಸೇತುವೆ ಸ್ಥಾಪಿಸುವ ಕೆಲಸ ಸುಮಾರು 2 ವರ್ಷಗಳಿಂದ ನಡೆಯುತ್ತಿದೆ.
ಸೇತುವೆಗೆ ಬೇಕಾಗುವ ಕಂಬವನ್ನು ನಿರ್ಮಾಣ ಮಾಡುವ ನೆಪದಲ್ಲಿ ಪತ್ರಿಕಾ ಪ್ರತಿನಿಧಿ ಭಾಸ್ಕರ್ ಶೆಟ್ಟಿ ಅವರ ಮನೆಯ ಮುಂದೆ ಗುಂಡಿ ತೆಗೆಯಲಾಗಿದೆ. ಇದನ್ನು ಮುಚ್ಚುವ ಕಾರ್ಯ ಇಂದಿಗೂ ನಡೆದಿಲ್ಲ. ತುಂತುರು ಮಳೆ ಬಂದರೂ ಈ ಗುಂಡಿ ನೀರಿನಿಂದ ತುಂಬಿ ಕಿರು ಕೆರೆಯಾಗಿ ಪರಿವರ್ತನೆಗೊಳ್ಳುತ್ತದೆ. ಪ್ರವಾಹ ಸಂದರ್ಭ ಉಪಯೋಗವಾಗುವ ಸೇತುವೆ ಕಟ್ಟುವ ನೆಪದಲ್ಲಿ ಸ್ಥಳೀಯ ನಿವಾಸಿಗಳಿಗೆ ಕಿರು ಪ್ರವಾಹದ ಅನುಭವ ನೀಡುತ್ತಿರುವ ಇಲಾಖೆ, ಸ್ವಲ್ಪ ಇತ್ತ ಗಮನಿಸಿದರೆ ಒಳಿತು.