ಮಡಿಕೇರಿ, ಜೂ. 3: ಕಳೆದ ಆರು ದಶಕಗಳಿಂದ ಮಡಿಕೇರಿ ಐತಿಹಾಸಿಕ ಕೋಟೆ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಾತ್ಮ ಗಾಂಧೀಜಿ ಕೊಡಗು ಗ್ರಂಥಾಲಯವು ಇಲ್ಲಿನ ಕೈಗಾರಿಕಾ ಬಡಾವಣೆಗೆ ಸ್ಥಳಾಂತರಗೊಳ್ಳುತ್ತಿದೆ. ಈ ದಿಸೆಯಲ್ಲಿ ಕೈಗಾರಿಕಾ ಬಡಾವಣೆಯ ನೂತನ ಕಟ್ಟಡ ಸಜ್ಜುಗೊಂಡು, ಈಗಾಗಲೇ ಕೋಟೆಯ ಕಟ್ಟಡದಿಂದ ಕಪಾಟುಗಳ ಸಹಿತ ಬಹುತೇಕ ಗ್ರಂಥಗಳು ಸ್ಥಳಾಂತರಗೊಂಡಿದೆ.
ತಾ. 4 ರಂದು ಅಥವಾ 5 ರಂದು ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಜನಪ್ರತಿನಿಧಿಗಳು ನೂತನ ಗ್ರಂಥಾಲಯವನ್ನು ಉದ್ಘಾಟಿಸಲಿದ್ದು, ಹೊಸ ಕಟ್ಟಡದಲ್ಲಿ ದಿನಪತ್ರಿಕೆಗಳ ಸಹಿತ ಗ್ರಂಥಗಳನ್ನು ಅಧ್ಯಯನ ಮಾಡುವ ಸಲುವಾಗಿ, ಓದುಗರಿಗೆ ಎಲ್ಲಾ ರೀತಿ ಮೂಲಭೂತ ಸೌಲಭ್ಯವನ್ನು ಕೈಗಾರಿಕಾ ಬಡಾವಣೆಯ ಕಟ್ಟಡದಲ್ಲಿ ಕಲ್ಪಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.