ಮಡಿಕೇರಿ, ಜೂ. 2: ಕೋವಿಡ್ -19 ಮುಂದುವರಿದ ಕಾರಣ ಇಸಿಹೆಚ್‍ಎಸ್ ಅವಲಂಭಿತರು ಜೂನ್ ಮತ್ತು ಜುಲೈ ತಿಂಗಳ ಒಂದು ಬಾರಿ (ಮೂವತ್ತು ದಿನಗಳ) ಔಷಧಿಗಳನ್ನು ಇಸಿಹೆಚ್‍ಎಸ್ ಚೀಟಿಯನ್ನು ತೋರಿಸಿ ಹೊರಗಡೆಯಿಂದ ತೆಗೆದುಕೊಳ್ಳಬಹುದು. ಔಷಧಿಗಳಿಗೋಸ್ಕರ ಜುಲೈ 31ರ ತನಕ ಇಸಿಹೆಚ್‍ಎಸ್‍ಗೆ ಬರುವ ಅವಶ್ಯಕತೆ ಇರುವುದಿಲ್ಲ ಎಂದು ಕ್ಲಿನಿಕ್ ಪ್ರಕಟಣೆ ತಿಳಿಸಿದೆ.

ಮಾತ್ರೆಗಳ ಬಿಲ್ಲಿನ ಜೊತೆಗೆ ಆಧಾರ್ ಕಾರ್ಡ್, ಇಸಿಹೆಚ್‍ಎಸ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ಕಿನ ಜೆರಾಕ್ಸ್ ಪ್ರತಿಯನ್ನು ತಂದುಕೊಡಬೇಕಾಗಿ ವಿನಂತಿಸಲಾಗಿದೆ.