ವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆ ನಿವಾಸಿ, ನಿವೃತ್ತ ಕಂದಾಯ ಇಲಾಖೆ ಗುಮಸ್ತ ರಾಮಪ್ರಸಾದ್ (67) ತಾ. 1 ರಂದು ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಟವೀರಾಜಪೇಟೆ ಚಿಕ್ಕಪೇಟೆ ನಿವಾಸಿ ದಿ.ನಾರಾಯಣ ರಾವ್ ಅವರ ಪುತ್ರ ಮಡಿಕೇರಿ ಕೆ.ಪಿ.ಟಿ.ಸಿ.ಎಲ್. ನೌಕರ ಟಿ.ಎನ್. ಅಶೋಕ್(58) ತಾ. 1 ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಟಕಿರುಗೂರು ಗ್ರಾಮ ಹೊನ್ನಿಕೊಪ್ಪದ ಸ್ವಾಮಿಯರವ ಅವರ ಪತ್ನಿ ಸರೋಜ (55) ಅವರು ತಾ. 2 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. 3 ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ. ಮೃತರು ಈರ್ವರು ಪುತ್ರಿ, ಓರ್ವ ಪುತ್ರನನ್ನು ಅಗಲಿದ್ದಾರೆ.