ಮಡಿಕೇರಿ, ಜೂ. 2: ಮದೆ ಗ್ರಾಮದ ಮದೆ ಮಹೇಶ್ವರ ಎಜುಕೇಷನ್ ಸಂಸ್ಥೆಯ ಕಾರ್ಯದರ್ಶಿ ಅವರು ಅನುದಾನಿತ ಪ್ರೌಢ ಶಾಲೆಯಾದ ಮದೆ ಮಹೇಶ್ವರ ಪ್ರೌಢಶಾಲೆಗೆ ಸೇರಿದ ಶಾಲೆ ಹಾಗೂ ಪೂರ್ಣ ಆಸ್ತಿ 5.30 ಎಕರೆ ಜಾಗವನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮೈಸೂರು ವಿಭಾಗ ಇವರಿಗೆ ದಾನ ನೀಡಿರುತ್ತಾರೆ. ಇದರಿಂದಾಗಿ ಮದೆ ಮಹೇಶ್ವರ ಪ್ರೌಢಶಾಲೆಯ ಆಡಳಿತ ಮಂಡಳಿಯ ಹೆಸರಿನಲ್ಲಿ ಯಾವುದೇ ಸ್ಥಿರ ಮತ್ತು ಚರಾಸ್ತಿ ಉಳಿದುಕೊಂಡಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ಶಾಲೆಗೆ ಯಾವುದೇ ಜಾಗ ಮತ್ತು ಕಟ್ಟಡ ಖಾಸಗಿ ಅನುದಾನಿತ ಪ್ರೌಢಶಾಲೆಯಾದ ಮದೆ ಮಹೇಶ್ವರ ಪ್ರೌಢಶಾಲೆ ಮದೆ ಶಾಲೆಗೆ ಲಭ್ಯವಿಲ್ಲದ ಕಾರಣ 2020-21 ನೇ ಸಾಲಿಗೆ ಮಾನ್ಯತೆ ನವೀಕರಿಸಲು ಅವಕಾಶ ಇಲ್ಲ, 2020-21 ನೇ ಸಾಲಿನಿಂದ ವಿದ್ಯಾರ್ಥಿಗಳ ದಾಖಲಾತಿ ಮಾಡುವುದನ್ನು ರದ್ದುಪಡಿಸಿದೆ. ಈ ಹಿನ್ನೆಲೆ ಪೋಷಕರು ಯಾವುದೇ ಕಾರಣಕ್ಕೂ ಈ ವಿದ್ಯಾಸಂಸ್ಥೆಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಬಾರದು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಕೋರಿದ್ದಾರೆ.