ಸುಂಟಿಕೊಪ್ಪ, ಜೂ.1: ಬೆಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಜೇನುಕಾಡು, ಸುಂಟಿಕೊಪ್ಪದಲ್ಲಿ ಆಹಾರ ಕಿಟ್ ವಿತರಿಸಲಾಯಿತು. ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲಿ ಬಂಧಿಯಾಗಿದ್ದ ಬಡವರು, ವಯೋವೃದ್ಧರು, ವಿಶೇಷಚೇತನರಿಗೆ ಬೆಂಗಳೂರು ಲಯನ್ಸ್ ಸಂಸ್ಥೆಯ ವತಿಯಿಂದ ಆಹಾರ ಕಿಟ್‍ಗಳನ್ನು ನೀಡಲಾಯಿತು. ಗ್ರಾ.ಪಂ. ಸದಸ್ಯೆ ನಾಗರತ್ನ ಅವರ ನೇತೃತ್ವದಲ್ಲಿ ವಿತರಿಸಿದರು.ಲತೀಫ್, ಇಬ್ರಾಹಿಂ, ಬಾಶೀದ್ ಮತ್ತಿತರರು ಇದ್ದರು.