ವೀರಾಜಪೇಟೆ, ಜೂ.1 : ಮಧ್ಯಪ್ರದೇಶ ರಾಜ್ಯ ಮೂಲದ 17 ಮಂದಿ ಗಣಿಗಾರಿಕೆಗಾಗಿ ಬೆಂಗಳೂರಿಗೆ ಬಂದಿದ್ದು ಅಲ್ಲಿನ ಕೆಲಸ ಮುಗಿದ ನಂತರ ಗಣಿಗಾರಿಕೆ ಕೆಲಸದ ನಿಮಿತ್ತ ವೀರಾಜಪೇಟೆಗೆ ನಿನ್ನೆ ದಿನ ಬಂದಾಗ 17 ಮಂದಿಯನ್ನು ಪ್ರಾಥಮಿಕ ಹಂತದ ಆರೋಗ್ಯ ತಪಾಸಣೆಗೊಳಪಡಿಸಿ ನಂತರ ಕ್ವಾರಂಟೈನ್‍ನಲ್ಲಿರಿಸಲಾಗಿದೆ.
ಈ 17 ಮಂದಿ ಕೊರೊನಾ ವೈರಸ್ ಲಾಕ್‍ಡೌನ್ ನಿರ್ಬಂಧದ ಹಿನ್ನೆಲೆಯಲ್ಲಿ ವೀರಾಜಪೇಟೆಯಲ್ಲಿಯೂ ಕೆಲಸ ನಿರ್ವಹಿಸದೆ ಮಧ್ಯಪ್ರದೇಶಕ್ಕೆ ಹಿಂತೆರಳುವುದಾಗಿ ತಾಲೂಕು ಆಡಳಿತಕ್ಕೆ ಬೇಡಿಕೆ ಇಟ್ಟಿದ್ದರು.