ಸಿದ್ದಾಪುರ, ಜೂ. 1: ಸಿದ್ದಾಪುರದ ಬ್ರಹ್ಮರ್ಷಿ ಶ್ರೀ ನಾರಾಯಣ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿ.ಕೆ. ಲೋಕೇಶ್ ಅವಿರೋಧವಾಗಿ ಆಯ್ಕೆಯಾದರು.

ಇತ್ತೀಚೆಗೆ ಸಿದ್ದಾಪುರದ ಎಸ್.ಎನ್.ಡಿ.ಪಿ. ಯೂನಿಯನ್ ಕಚೇರಿಯಲ್ಲಿ ನಡೆದ 2020 ರಿಂದ 2025 ರವರೆಗಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ವಿ.ಕೆ. ಲೋಕೇಶ್, ಉಪಾಧ್ಯಕ್ಷರಾಗಿ ಎಂ.ವಿ. ಸಜೀವನ್ ಸರ್ವ ಸದಸ್ಯರ ಸಮ್ಮತ್ತಿಯೊಂದಿಗೆ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭ ಸಹಕಾರಿ ಸದಸ್ಯರುಗಳಾದ ಕೆ.ಜಿ. ಪದ್ಮನಾಭ, ಡಿ. ರಂಜನ್, ಟಿ.ಎ. ನಾರಾಯಣ, ಟಿ.ಆರ್. ವಾಸುದೇವನ್, ಕೆ.ಆರ್. ದೇವಯಾನಿ, ಅಖಿಲ್ ಚಂದ್ರ, ಟಿ.ಸಿ. ಅಶೋಕ್, ಎಂ.ಎ. ಆನಂದ, ಪಿ.ಎಸ್. ಹರಿದಾಸ್, ಕೆ.ಆರ್. ಸತೀಶ್, ನಸೀಮಾ, ರೀಶಾ, ಇತರರು ಹಾಜರಿದ್ದರು. ಆಯ್ಕೆ ಪ್ರಕ್ರಿಯೆ ಕಾರ್ಯವನ್ನು ಧೀರಜ್‍ಕುಮಾರ್ ನಿರ್ವಹಿಸಿದರು.