ಶನಿವಾರಸಂತೆ, ಜೂ. 1: ಸಮೀಪದ ಕೊಡ್ಲಿಪೇಟೆ ವ್ಯಾಪ್ತಿಯ ಕಿರಿಕೊಡ್ಲಿ ಮಠದಲ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಸಮ್ಮುಖದಲ್ಲಿ 3ನೇ ಸರಳ ವಿವಾಹ ನೆರವೇರಿತು. ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರುಗುಂದ ಗ್ರಾಮದ ಷಣ್ಮುಖ - ವಿನೋದಾ ದಂಪತಿಯ ಪುತ್ರಿ ಸುಶ್ಮಿತಾ ಹಾಗೂ ಸಂಪಿಗೆದಾಳು ಗ್ರಾಮದ ಮಲ್ಲಿಕಾರ್ಜುನ - ನಾಗವೇಣಿ ದಂಪತಿಯ ಪುತ್ರ ರವಿಕುಮಾರ್ ಅವರು ಸ್ವಾಮೀಜಿಯವರ ಪಾದಪೂಜೆ ಮಾಡಿ ನೂತನ ದಂಪತಿಗಳಾದರು. ಪುರೋಹಿತ ಸೋಮಶೇಖರ ಶಾಸ್ತ್ರಿ ವಿವಾಹ ವಿಧಿಗಳನ್ನು ನೆರವೇರಿಸಿದರು. 2 ಕುಟುಂಬಗಳ ಬಂಧುಗಳು ಪಾಲ್ಗೊಂಡು ವಧೂ- ವರರನ್ನು ಆಶೀರ್ವದಿಸಿ ಸಿಹಿ ಭೋಜನ ಸವಿದರು.

ಸಮಾಜ ಸುಧಾರಕ ಬಸವಣ್ಣನವರ ಆದರ್ಶಗಳನ್ನು ಪಾಲಿಸುವುದರ ಜೊತೆಗೆ ದುಂದುವೆಚ್ಚ, ಆಡಂಬರವಿಲ್ಲದೆ ಸರಳ ವಿವಾಹಗಳನ್ನು ನೆರವೇರಿಸಲು ಲಾಕ್‍ಡೌನ್ ಸಹಕಾರಿಯಾಗಿದೆ. ಪೋಷಕರಿಗೆ ಖರ್ಚು ಕಡಿಮೆಯಾಗುತ್ತಿದೆ. ಇದೊಂದು ಸಮಾಜ ಸೇವೆ ಅಷ್ಟೇ. ಪೋಷಕರ ಮನವಿಗೆ ಸ್ಪಂದಿಸಿ ಮಠದಲ್ಲಿ ಸರಳ ವಿವಾಹ ಕಾರ್ಯ ನಡೆಯುತ್ತಿದೆ ಎಂದು ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.