ವೀರಾಜಪೇಟೆ, ಜೂ. 1: ವೀರಾಜಪೇಟೆಯ ಹೋಪ್‍ಟ್ರಸ್ಟ್ ಸಂಘಟನೆ ವತಿಯಿಂದ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ತಂಡಕ್ಕೆ ಆಸ್ಪತ್ರೆಯ ಸಭಾಂಗಣದಲ್ಲಿ ಶಾಲು ಹೊದಿಸಿ ಗೌರವ ಸಲ್ಲಿಸಲಾಯಿತು. ಅತಿಥಿಯಾಗಿ ಆಗಮಿಸಿದ ನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಮರಿಸ್ವಾಮಿ ಇಲ್ಲಿನ ಮಜೀದ್ ಎ ಆಜಾಂ ಮಸೀದಿಯ ಅಧ್ಯಕ್ಷ ಎಸ್.ವೈ. ನಿಸ್ಸಾರ್ ಅಹಮ್ಮದ್, ನಿಯಾಜ್ ಮತ್ತಿತರರು ಮಾತನಾಡಿದರು.
ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ, ಡಾ. ಅನಿಲ್‍ಧವನ್, ಡಾ. ಶ್ರೀನಿವಾಸ್ ಮೂರ್ತಿ ಡಾ. ಗಿರಿಧರ್, ಡಾ. ಆನಂದ್, ಡಾ. ಹೇಮಾಪ್ರಿಯ, ಡಾ. ರೇಣುಕಾ ಸೇರಿದಂತೆ ಶುಶ್ರೂಷಕಿಯರು, ಸಿಬ್ಬಂದಿಗಳನ್ನು ಗೌರವಿಸಲಾಯಿತು. ಹೋಪ್‍ಟ್ರಸ್ಟ್ ಸಂಘಟನೆಯ ಅಧ್ಯಕ್ಷ ಅಖಿಲ್, ಏಜಾಜ್ ಅಹಮ್ಮದ್, ಖಾಲ್ಸದ್, ಇಂತಿಯಾಜ್, ರಾಜಿಕ್ ಮತ್ತಿತರರು ಹಾಜರಿದ್ದರು. ಸಂಘಟನೆಯ ಆಶಿಪ್ ನಿರೂಪಿಸಿದರು.