ಕುಶಾಲನಗರ, ಜೂ. 1: ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಬೈಚನಹಳ್ಳಿಯ ಸರ್ವೆ ನಂ 115 ಹಾಗೂ 115/1 ರಲ್ಲಿ ನಿಯಮಬಾಹಿರ ಬಡಾವಣೆ ನಿರ್ಮಾಣಗೊಳ್ಳುತ್ತಿರುವ ಬಗ್ಗೆ ಕುಶಾಲನಗರದ ಸರ್ವ ರಾಜಕೀಯ ಪಕ್ಷಗಳ ಮುಖಂಡರು ಮತ್ತು ರಾಜಕೀಯೇತರ ಸಂಘಟನೆಗಳ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪಟ್ಟಣ ಪಂಚಾಯ್ತಿಗೆ ಭೇಟಿ ನೀಡಿದ ಮುಖಂಡರುಗಳು ತಾಲೂಕು ತಹಶೀಲ್ದಾರ್ ಮತ್ತು ಪಂಚಾಯ್ತಿ ಮುಖ್ಯಾಧಿಕಾರಿಗಳ ಬಳಿ ಚರ್ಚೆ ನಡೆಸಿದರು. 1980 ದಶಕದಲ್ಲಿ ಸಣ್ಣ ಮತ್ತು ಮಧ್ಯಮ ನಗರಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ ಬಡಾವಣೆ ನಿರ್ಮಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡುವ ಉದ್ದೇಶದಿಂದ ಕುಶಾಲನಗರದ ಕೆಲವು ಬಡಾವಣೆಗಳಲ್ಲಿ ಸ್ವಾಧೀನ ಪ್ರಕ್ರಿಯೆ ನಡೆಸಲಾಗಿತ್ತು.
ಆ ಸಂದರ್ಭ ಮೇಲ್ಕಂಡ ಸರ್ವೆ ನಂಬರ್ನ ಮಾಲೀಕರು ತಾವು ವಿದೇಶದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಕುಶಾಲನಗರಕ್ಕೆ ಹಿಂತಿರುಗಿದ ಬಳಿಕ ಸುಸಜ್ಜಿತ ನರ್ಸಿಂಗ್ ಹೋಂ ಸ್ಥಾಪಿಸಿ ಸೇವೆ ಸಲ್ಲಿಸುವ ಇರಾದೆ ವ್ಯಕ್ತಪಡಿಸಿದ ಹಿನೆÀ್ನಲೆಯಲ್ಲಿ ಷರತ್ತಿಗೊಳಪಡಿಸಿ ಜಾಗದ ಭೂಸ್ವಾಧೀನವನ್ನು ಪಂಚಾಯ್ತಿ ರದ್ದುಗೊಳಿಸಲಾಗಿತ್ತು. ಆದರೆ ಇದೀಗ 2.25 ಎಕರೆ ಜಾಗದಲ್ಲಿ ನರ್ಸಿಂಗ್ ಹೋಂ ಬದಲಾಗಿ ಬಡಾವಣೆ ನಿರ್ಮಿಸಲಾಗುತ್ತಿದೆ ಎಂದು ಜಿ.ಪಂ. ಸದಸೆÀ್ಯ ಕೆ.ಪಿ.ಚಂದ್ರಕಲಾ, ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್, ಮಾಜಿ ಸದಸ್ಯ ವಿ.ಪಿ.ಶಶಿಧರ್, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ಕುಶಾಲನಗರ ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು, ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಮತ್ತಿತರರು ಆರೋಪಿಸಿದ್ದಾರೆ.
ಕುಶಾಲನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಖಾತೆ ಮಾಡಿಕೊಳ್ಳಲು ರಾಜಕೀಯ ಪ್ರಭಾವ ಬೀರುತ್ತಿದ್ದಾರೆ.
ಪಾರ್ಕ್, ಸಿಎ ಸೈಟ್ಗೆ ಜಾಗ ನೋಂದಾಯಿಸಿಲ್ಲ ಎಂದು ಆರೋಪಿಸಿರುವ ಅವರು ಕೂಡಲೆ ಈ ಸ್ವತ್ತು ಪ್ರಕ್ರಿಯೆ ನಿಲ್ಲಿಸಬೇಕು. ಪಟ್ಟಣ ಪಂಚಾಯ್ತಿ ಕಾನೂನು ಸಲಹೆಗಾರರು ನಿಯಮಬಾಹಿರ ಬಡಾವಣೆ ನಿರ್ಮಾಣ ಯೋಜನೆಗೆ ಸಹಕಾರ ನೀಡಿರುವ ಕಾರಣ ಪಂಚಾಯ್ತಿ ಬದಲಿ ಕಾನೂನು ಸಲಹೆಗಾರರನ್ನು ನೇಮಿಸುವ ಮೂಲಕ ಸರಕಾರದ ಆಸ್ತಿ ಉಳಿಸುವಂತೆ ಪ್ರಯತ್ನಿಸಬೇಕಾಗಿದೆ ಎಂದು ಆಗ್ರಹಗಳು ಕೇಳಿಬಂದಿವೆ.
ಈ ಬಗ್ಗೆ ಮನವಿ ಸ್ವೀಕರಿಸಿದ ತಹಶೀಲ್ದಾರ್ ಗೋವಿಂದರಾಜು ಈ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ಚೌಕಟ್ಟಿನಡಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಿಪಂ ಸದಸ್ಯೆ ಮಂಜುಳಾ, ಪಪಂ ಸದಸ್ಯರಾದ ಪ್ರಮೋದ್ ಮುತ್ತಪ್ಪ, ರೂಪಾ ಉಮಾಶಂಕರ್, ಶೇಖ್ ಖಲೀಮುಲ್ಲಾ, ಎಂ.ಬಿ.ಸುರೇಶ್, ಮುಳ್ಳುಸೋಗೆ ಗ್ರಾಪಂ ಸದಸ್ಯೆ ರುದ್ರಾಂಬಿಕೆಸುಂದರೇಶ್, ಸಂಘಸಂಸ್ಥೆಗಳ ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಮಂಜುನಾಥ್, ವೆಂಕಟೇಶ್ ಪೂಜಾರಿ, ಚಂದ್ರು ಮತ್ತಿತರರು ಇದ್ದರು.