ಕೂಡಿಗೆ, ಜೂ.1: ಸರಕಾರ ನಿಯಮದ ಪ್ರಕಾರ ಗ್ರಾ.ಪಂ. ವ್ಯಾಪ್ತಿಯ ಜಮಾಬಂದಿ ಕಾರ್ಯಕ್ರಮಗಳು ವರ್ಷಕ್ಕೆ ಒಂದು ಬಾರಿ ನೆಡೆಸಬೇಕೆಂಬ ಆದೇಶವಿದ್ದರೂ ಎರಡು ವರ್ಷಗಳಿಂದ ಕೂಡಿಗೆಯ ಗ್ರಾ. ಪಂ.ಯಲ್ಲಿ ಜಮಾಬಂದಿ ಕಾರ್ಯಕ್ರಮ ನಡೆದಿಲ್ಲ. ಗ್ರಾ. ಪಂ. ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಪಾರದರ್ಶಕತೆ ವ್ಯವಸ್ಥೆಯ ಅಡಿಯಲ್ಲಿ ಆಯಾ ವ್ಯಯವನ್ನು ಮಂಡಿಸುವ ಪ್ರಮುಖ ಕಾರ್ಯಕ್ರಮವಾಗಿರುತ್ತದೆ. ಅದರೂ ಸಹ ಕೂಡಿಗೆ ಗ್ರಾ. ಪಂ. ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಅಲ್ಲದೆ ಗ್ರಾ.ಪಂ.ಗೆ ಬಂದ ತೆರಿಗೆ ಹಣವನ್ನು ಮನಬಂದತೆ ಖರ್ಚು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಜಿಲ್ಲಾ ಜೆಡಿಎಸ್ ಪರಿಶಿಷ್ಟ ಜಾತಿ ಜಿಲ್ಲಾಧ್ಯಕ್ಷ ಅಣ್ಣಯ್ಯ ಸೇರಿದಂತೆ ಗ್ರಾಮಸ್ಥರು ಆರೋಪಿಸಿದ್ದಾರೆ.