ಗೋಣಿಕೊಪ್ಪಲು, ಮೇ 31: ದ. ಕೊಡಗಿನ ಹಲವಾರು ಗ್ರಾಮಗಳಲ್ಲಿ ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಾ, ರೈತರ ನಿದ್ದೆಗೆಡಿಸಿರುವ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯು ತಾರತಮ್ಯ ನೀತಿ ಅನುಸರಿಸು ತ್ತಿರುವುದರಿಂದ ಜಿಲ್ಲಾಡಳಿವು ಕೂಡಲೇ ಮಧ್ಯೆ ಪ್ರವೇಶಿಸಿ ಹುಲಿ ಸೆರೆಗೆ ವಿಶೇಷ ಆಸಕ್ತಿ ವಹಿಸುವಂತೆ ಅಗ್ರಹಿಸಿ ಜಿಲ್ಲಾಧಿಕಾರಿ ಅನೀಶ್‍ಕಣ್ಮಣಿ ಜಾಯ್ ರವರಿಗೆ ರೈತ ಸಂಘ ಮನವಿ ಮಾಡಿದೆ.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ರೈತ ಸಂಘದ ಮುಖಂಡರು ಹುಲಿ ಹಾವಳಿಯಿಂದ ಜಾನುವಾರುಗಳು ಬಲಿಯಾಗುತ್ತಿರುವ ಬಗ್ಗೆ ಸಮಗ್ರ ವಿವರ ನೀಡಿದರು.

ಭೇಟಿ ಸಂದರ್ಭ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಅಮ್ಮತ್ತಿ ಹೋಬಳಿಯ ಅಧ್ಯಕ್ಷರಾದ ಮಂಡೇಪಂಡ ಪ್ರವೀಣ್, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲಂಡ ಸೂರಜ್, ಶ್ರೀಮಂಗಲ ಹೋಬಳಿ ಸಂಚಾಲಕ ಚಟ್ಟಂಗಡ ಕಂಬ ಕಾರ್ಯಪ್ಪ, ಹಿರಿಯ ವಕೀಲರಾದ ಹೇಮಚಂದ್ರ, ರೈತ ಮುಖಂಡರುಗಳಾದ ಅಪ್ಪಚಂಗಡ ಮೋಟಯ್ಯ, ಪುಚ್ಚಿಮಾಡ ರಾಯ್ ಮಾದಪ್ಪ, ಮುಂತಾದವರು ಹಾಜರಿದ್ದರು.