ಮಡಿಕೇರಿ: ಶಾಸಕ ಕೆ.ಜಿ. ಬೋಪಯ್ಯ ಮತ್ತು ಎಂ.ಪಿ. ಅಪ್ಪಚ್ಚು ರಂಜನ್ ಅವರು ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಕ್ಲೀನರ್ಗಳು ಮತ್ತು ದೇವಸ್ಥಾನದ ಅರ್ಚಕರಿಗೆ ನಗರದ ಅಂಬೇಡ್ಕರ್ ಭವನದಲ್ಲಿ ಆಹಾರದ ಕಿಟ್ ವಿತರಿಸಿದರು.
ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಕ್ಲೀನರ್ಗಳು ಸೇರಿದಂತೆ ಒಟ್ಟು 93 ಜನರಿಗೆ ಮತ್ತು 77 ಅರ್ಚಕರಿಗೆ ತಲಾ 10 ಕೆ.ಜಿ. ಅಕ್ಕಿ, 1 ಲೀಟರ್ ಎಣ್ಣೆ, 1 ಕೆ.ಜಿ. ಉಪ್ಪು, ಬೇಳೆ ಮತ್ತು ಸಕ್ಕರೆ ಒಳಗೊಂಡ ಕಿಟ್ ವಿತರಿಸಲಾಯಿತು. ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಮಡಿಕೇರಿ ತಾ.ಪಂ. ಇಒ ಲಕ್ಷ್ಮೀ, ತಹಶೀಲ್ದಾರ್ ಮಹೇಶ್, ಶಿರಸ್ತೇದಾರ್ ಪ್ರವೀಣ್ ಕುಮಾರ್ ಇತರರು ಇದ್ದರು. ಸೋಮವಾರಪೇಟೆ: ಕನ್ನಡ ಚಲನಚಿತ್ರ ನಟ, ಕಾರೇಕೊಪ್ಪ ನಿವಾಸಿ ಜೈಜಗದೀಶ್ ಅವರ ಕುಟುಂಬದಿಂದ ಕಾರೇಕೊಪ್ಪದ ಬಡ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಕೊರೊನಾ ಆತಂಕದ ದಿನಗಳಲ್ಲಿ ಕೂಲಿ ಕಾರ್ಮಿಕ ವರ್ಗ ಕೆಲಸವಿಲ್ಲದೇ ತೊಂದರೆಗೆ ಸಿಲುಕಿದ್ದನ್ನು ಮನಗಂಡ ಜೈಜಗದೀಶ್ ಕುಟುಂಬಸ್ಥರು, ಕಾರೇಕೊಪ್ಪದ ಕಾಲೋನಿ ಸೇರಿದಂತೆ ಸುತ್ತಮುತ್ತಲ 100ಕ್ಕೂ ಅಧಿಕ ಬಡ ಕಾರ್ಮಿಕ ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.ಮಡಿಕೇರಿ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಸ್ಮರಣಾರ್ಥ ಮಡಿಕೇರಿಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಮೂಲಕ ಟ್ಯಾಕ್ಸಿ ಚಾಲಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.
ಇದಕ್ಕೆ ಚಾಲನೆ ನೀಡಿದ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು, ಮಿಟ್ಟು ಚಂಗಪ್ಪ ಅವರು ರಾಜೀವ್ ಗಾಂಧಿಯವರ ಆಪ್ತವಲಯದ ಸದಸ್ಯರಾಗಿದ್ದು ಅವರ ಸ್ಮರಣಾರ್ಥ ಕಿಟ್ ವಿತರಣೆಗೆ ಪ್ರಾಯೋಜಕತ್ವ ನೀಡಿ ರಾಜೀವ್ ಸ್ಮರಣೆಯನ್ನು ಅರ್ಥಪೂರ್ಣಗೊಳಿಸಿದ್ದಾರೆ ಎಂದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಅನೇಕ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಕಾಂಗ್ರೆಸ್ನ ಪ್ರಮುಖರಾದ ಮಿಟ್ಟು ಚಂಗಪ್ಪ ಅವರು ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು
ಕಿಟ್ ವಿತರಣಾ ವ್ಯವಸ್ಥೆಗಳನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ಮತ್ತು ತಂಡದವರು ನಿರ್ವಹಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ಕುಮಾರ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಸದಸ್ಯ ಧರ್ಮಸೇನಾ, ಕೆಪಿಸಿಸಿ ಉಸ್ತುವಾರಿ ಮಂಜುಳಾರಾಜ್, ಕೆಪಿಸಿಸಿ ಪ್ರಮುಖರಾದ ಅರುಣ್ ಮಾಚಯ್ಯ, ಕೆ.ಪಿ. ಚಂದ್ರಕಲಾ, ನಾಪಂಡ ಮುತ್ತಪ್ಪ, ಹೆಚ್.ಎಂ. ನಂದಕುಮಾರ್, ವೀಕ್ಷಕರಾದ ಟಿ.ಎಂ. ಸಯೀದ್, ಬಿಸಿಸಿ ಅಧ್ಯಕ್ಷ ಅಪ್ರು ರವೀಂದ್ರ, ರಂಜಿ ಪೂಣಚ್ಚ, ನವೀನ್, ಸತೀಶ್, ಅನಂತ್ ಮುಖಂಡರುಗಳಾದ ಶಿವು ಮಾದಪ್ಪ, ವಿ.ಪಿ. ಶಶಿಧರ್, ಧರ್ಮಜಾ ಉತ್ತಪ್ಪ, ಟಾಟು ಮೊಣ್ಣಪ್ಪ, ಸುರಯ್ಯ ಅಬ್ರಹಾರ್, ವಕ್ಫ್ ಬೋರ್ಡ್ ಅಧ್ಯಕ್ಷ ಯಾಕೂಬ್, ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಜೈಜಗದೀಶ್, ಪ್ರಭುರೈ, ರವಿಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಂಕಜ, ಶ್ರೀಜಾ ಸಾಜಿ, ಕುಸುಮಾ ಜೋಯಪ್ಪ ಮಿನಾಜ್ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.