ಕೂಡಿಗೆ, ಮೇ 30: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಈಗಾಗಲೇ ನಿರ್ಮಾಣ ಮಾಡುತ್ತಿರುವ ಮನೆಗಳ ಕಾಮಗಾರಿ ಶೇ.90 ರಷ್ಟು ಮುಗಿದಿದ್ದು, ಇನ್ನೂ ಬಾಕಿ ಇರುವ ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬ್ಯಾಡಗೊಟ್ಟ ಗ್ರಾಮದಲ್ಲಿ ಸರಕಾರದಿಂದ 365 ಫಲಾನುಭವಿಗಳಿಗೆ ಮನೆಗಳ ನಿರ್ಮಾಣ ಮಾಡಿಕೊಡುವ ಯೋಜನೆಯನ್ನು ಸರಕಾರ ರೂಪಿಸಿತು.
ಅದರಂತೆ ನಿಯಮಗಳ ಅನುಸಾರವಾಗಿ ವಿವಿಧ ಇಲಾಖೆಯ ಅಡಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಮೂಲಭೂತ ಸೌಕರ್ಯಗಳ ಒದಗಿಸುವ ಕಾರ್ಯ ಆಗುತ್ತಿದೆ. ಸರಕಾರದಿಂದ ಮಂಜೂರು ಆಗಿರುವ 365 ಮನೆಗಳಲ್ಲಿ 350 ಮನೆಗಳು ನಿರ್ಮಾಣವಾಗಿವೆ. ಇನ್ನೂ ಬಾಕಿ ಉಳಿದ ಮನೆಗಳ ಕಾಮಗಾರಿಯನ್ನು ಪೂರ್ಣಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.